ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರುವವರ ಮೇಲೆ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

0
63

ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿಯ ರಸಗೊಬ್ಬರ ಮಾರಾಟಗಾರರು ಗೊಬ್ಬರದ ದರ ಹೆಚ್ಚಿಸಿ ಮಾರಾಟಮಾಡಿ ರೈತರನ್ನು ದೊಚುತ್ತಿದ್ದಾರೆ ತಮ್ಮಲ್ಲಿ ಗೊಬ್ಬರವು ಲಭ್ಯವಿದ್ದರು ಸಹ ಲಭ್ಯವಿಲ್ಲ ಹೆಚ್ಚಿನ ಹಣಪಾವತಿಸಿದರೆ ಬೇರೆಕಡೆಯಿಂದ ತರಿಸಿ ಕೊಡುತ್ತೇವೆ ಎಂದು ಹೇಳಿ ರೈತರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಇತಂಹವರ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಆಗ್ರಹಿಸಿದರು.

ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಮೊದಲೆ ಈ ಭಾಗದ ರೈತರು ಪ್ರವಾಹ ಮತ್ತು ಸತತ ಬರಗಾಲದಿಂದ ತತ್ತರಿಸಿದ್ದಾರೆ ಈ ಬಾರಿ ಒಂದಿಷ್ಟು ಉತ್ತಮವಾಗಿ ಮಳೆಯಾದ್ದರಿಂದ ಭತ್ತ, ಹತ್ತಿ,ತೊಗರಿ ಬೇಳೆಗಳನ್ನು ಬಿತ್ತಿದ್ದಾರೆ. ಬೇಳೆಗೆ ಗೊಬ್ಬರವನ್ನು ಸರಿಯಾದ ಸಮಯಕ್ಕೆ ನೀಡಬೇಕು ಇಲ್ಲವಾದಲ್ಲಿ ಬೆಳೆ ಇಳುವರಿ ಬರುವುದಿಲ್ಲಾ ಗೊಬ್ಬರ ಖರಿದಿಗೆ ಅಂಗಡಿಗಳಿಗೆ ಹೊದರೆ ಅಂಗಡಿಯಲ್ಲಿ ಮಾಲಿಕರು ಗೊಬ್ಬರ ಸ್ಟಾಕ ಇಲ್ಲಾ ಹೆಚ್ಚಿಗೆ ಹಣ ನೀಡಿದರೆ ಬೇರೆಕಡೆಯಿಂದ ತರೆಸಿಕೊಡತ್ತೀವಿ ಎಂದು ಹೇಳುತ್ತಾರೆ.

Contact Your\'s Advertisement; 9902492681

ಇವರು ಹೇಳುವ ಹಾಗೆ ಸರ್ಕಾರ ಸರ್ಮಪಕವಾಗಿ ರಸಗೊಬ್ಬರ ವಿತರಸಿಲ್ಲವೋ ಅಥವಾ ವಿತರಿಸಿದರೂ ಮಾಲೀಕರು ಹಣದ ಆಸೆಗೆ ಈತರ ಹೇಳುತ್ತಿದ್ದಾರೊ ಎನ್ನುವುಸು ಸ್ಪಷ್ಟವಿಲ್ಲಾ ರಸಗೊಬ್ಬರ ಅಂಗಡಿಯಲ್ಲಿ ರೈತರು ಹಣಕ್ಕಾಗಿ ಪೀಡಿಸುವ ವಿಷಯವು ಎಲ್ಲಾ ಕೃಷಿ ಅಧಿಕಾರಿಗಳಿಗೆ ಗೊತ್ತಿದ್ದರು ಸಹ ಯಾವುದೆ ರೀತಿಯ ಕ್ರಮ ಜರುಗಿಸದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಇನ್ನೊಂದು ವಾರದಲ್ಲಿ ಈ ಕುರಿತು ದಿಟ್ಟ ಕ್ರಮ ಕೈಗೊಂಡು ರೈತರಿಗೆ ಅನುವು ಮಾಡಿಕೊಡಬೇಕು ಇಲ್ಲವಾದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಮಯದಲ್ಲಿ ಮುಖಂಡರಾದ ಮಲ್ಲಪ್ಪ ಹುಬ್ಬಳಿ, ಬಸವರಾಜ ದೀವಳಗುಡ್ಡ,ಮಲ್ಲು ದಂಡಿನ್, ಮರೆಪ್ಪ, ಆದಪ್ಪ ಕೆಂಗೂರಿ, ಶಬ್ಬೀರ ಕನ್ನೆಳ್ಳಿ, ಧನುಷ್ ಮಾಚಗುಂಡಾಳೆ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here