ಸುರಪುರ: ಬೆಂಗಳೂರಿನ ಕೆಜಿಹಳ್ಳಿ ಡಿಜೆಹಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆಸಿದ ಸ್ಥಳಿಯ ಶಾಸಕರ ಮೆನ ಹಾಗು ಪೊಲೀಸ್ ಠಾಣೆ ಮತ್ತು ಪೊಲೀಸರ ಮೇಲಿನ ಹಲ್ಲೆಯನ್ನು ಅಖಿಲ ಬಾರತ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ ಎಂದು ಕಲಬುರ್ಗಿ ವಿಭಾಗೀಯ ಪ್ರಮುಖ ಉಪೇಂದ್ರ ನಾಯಕ ಸುಬೇದಾರ್ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜಿ.ಹಳ್ಳಿಯಲ್ಲಿ ನಡೆದಿರುವ ಘಟನೆಯು ಪೂರ್ವ ನಿಯೋಜಿತವಾಗಿ ಸಂಚುರೋಪಿಸಿ ಕೃತ್ಯ ಎಸಗಿದ್ದಾರೆ ಇಂದು ಅನುಮಾನ ಮೂಡುತ್ತಿದೆ. ಒಬ್ಬ ಜನಪ್ರತಿನಿಧಿಯ ಮನೆಯ ಮೇಲೆ ದಾಳಿ ಮಾಡಿದ್ದಾರೆ ಸರ್ಕಾರವು ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸಿ ನಿಶಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರು ಯಾರೆ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಎಬಿವಿಪಿ ಒತ್ತಾಯಿಸುತ್ತದೆ ಎಂದರು.
ಸರ್ಕಾರವು ಈ ಆನಲೈನ್ ಶಿಕ್ಷಣಕ್ಕೆ ಬ್ರೇಕ್ ಹಾಕಬೇಕು ಇದರಿಂದ ಮಕ್ಕಳು ಪಾಠ ಕಲಿಯುವುದಕ್ಕೆ ಪೂರಕವಾದುದಲ್ಲ.ಅತಿ ಹೆಚ್ಚಿನ ಸಮಯ ಮೊಬೈಲ್ ಹಿಡಿಯುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರುಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ಮಕ್ಕಳು ಶೀಕ್ಷಕರ ಎದುರಲ್ಲಿದ್ದು ಕಲಿಯುವ ಪಾಠ ಬೇಗ ಅರ್ಥವಾಗಲಿದೆ.ಆದರೆ ಆನ್ಲೈನ್ ಮೂಲಕ ಹೇಳುವ ಪಾಠ ಮಕ್ಕಳಿಗೆ ಅರ್ಥವಾಗದು.ಹೀಗಾಗಿ ಸರ್ಕಾರ ಇದರ ಬದಲು ಪರ್ಯಾಯ ಕ್ರಮಗಳನ್ನು ಅಳವಡಿಸಲು ಚಿಂತಿಸಬೇಕು ಹಾಗೆ ಈ ಲಾಕ್ ಡೌನ ಸಂಧರ್ಭದಲ್ಲಿ ಖಾಸಗಿ ಶಾಲೆಯ ಶಿಕ್ಷಕರು ಮತ್ತು ಉಪನ್ಯಾಸಕರು ಕರೊನಾದಿಂದ ತುಂಬಾ ನಷ್ಟ ಅನುಭವಿಸಿದ್ದಾರೆ ಎಷ್ಟೋಜನ ತಮ್ಮ ಕೆಲಸವನ್ನು ಕಳೆದುಕೊಂಡು ತಮ್ಮ ಸಂಸಾರ ನಡೆಸಲು ಹೆಣಗಾಡುವ ಪರಿಸ್ಥಿತಿಯಿದೆ ಸರ್ಕಾರ ಬೆರೆಯಲ್ಲಾ ಕಾರ್ಮಿಕರಂತೆ ಅತಿಥಿ ಉಪನ್ಯಾಸಕ ಮತ್ತು ಶಿಕ್ಷಕರಿಗೆ ವಿಶೇಷ ಪ್ಯಾಕೇಜ ಘೊಷಿಸಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡ ನಾಗರಾಜ ಮಕಾಶಿ ಇದ್ದರು.