ಜಾತಿ ಪ್ರಮಾಣ ಪತ್ರಕಾಗಿ ತಾಟು ಬಾರಿಸಿ ವಿನೂತನ ಪ್ರತಿಭಟನೆ

0
232

ಯಡ್ರಾಮಿ: ತಳವಾರ ಸಮುದಾಯಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ತಳವಾರ ಎಸ್‌.ಟಿ ಹೋರಾಟ ಸಮಿತಿ ಅಧ್ಯಕ್ಷ ರಾಚಣ್ಣ ಎಚ್.ತಳವಾರ ನೇತೃತ್ವದಲ್ಲಿ ಪಟ್ಟಣದ ಸರ್ದಾರ ಶರಣಗೌಡ ವೃತ್ತದಿಂದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಾಟು ಬಾರಿಸಿ ವಿನೂತನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಳವಾರ ಎಸ್.ಟಿ ಹೋರಾಟ ಸಮಿತಿಯ ಮುಖಂಡತಾದ ಡಾ. ಸರ್ದಾರ ರಾಯಪ್ಪ ಮಾತನಾಡಿ, ತಳವಾರ ಸಮುದಾಯ ಮುಸರಿ ಕೆಲಸ ಮಾಡುತ್ತಾ ಬಾಳ ಶೋಷಣೆ ,ದಬ್ಬಾಳಿಕೆ ,ದೌರ್ಜನ್ಯಕ್ಕೆ ಒಳಪಟ್ಟಿದೆ. ಸರಿಯಾದ ಶಿಕ್ಷಣ ಇಲ್ಲದೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಈ ಸಮಾಜಕ್ಕೆ ಕೇಂದ್ರ ಸರ್ಕಾರ ನಾಯಕ,ನಾಯ್ಕಡ್ ಮತ್ತು ಸಿದ್ಧಿ ಸಮುದಾಯಗಳ ಜತೆಗೆ ತಳವಾರ ಹಾಗೂ ಪರಿವಾರ ಸಮುದಾಯಗಳಿಗೂ ಎಸ್.ಟಿ ಪ್ರಮಾಣ ಪತ್ರ ನೀಡಲು ರಾಷ್ಟ್ರಪತಿಯವರಿಂದ ಅಂಕಿತವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿ ಎಸ್.ಟಿ ಪ್ರಮಾಣ ಪತ್ರ ನೀಡಲು ಆದೇಶಿಸಿದೆ, ಆದರೆ ರಾಜ್ಯ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ತಳವಾರ, ಪರಿವಾರದ ಜನರಿಗೆ ಎಸ್.ಟಿ ಪ್ರಮಾಣ ಪತ್ರ ನೀಡಲು ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಣ್ಣು, ಕಿವಿ, ಬಾಯಿ ಇದ್ದರು ಈ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ, ಅದಕ್ಕಾಗಿ ಈ ಕಿವ್ಡ ಸರ್ಕಾರಕ್ಕೆ ತಾಟು ಬಾರಿಸಿವ ಮೂಲಕ ಎಚ್ಚರಿಸುತ್ತಿದ್ದೆವೆ ಎಂದರು.

ನಂತರ ದೇವೇಂದ್ರ ಚಿಗರಹಳ್ಳಿ ಮಾತನಾಡಿ ತಳವಾರ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜೇಂದ್ರ ರಾಜವಾಳ ಮಾತನಾಡಿ ರಾಜ್ಯ ಸರ್ಕಾರಕ್ಕೆ ತಳವಾರ ಸಮುದಾಯ ಕಾನೂನಾತ್ಮಕ ಎಸ್.ಟಿ ಪ್ರಮಾಣಪತ್ರ ಕೇಳುತ್ತಿದೆ ಹೊರತು ಭಿಕ್ಷೆಯಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ. ಕೂಡಿ, ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿರುವ ಅದರ 39 ಪರ್ಯಾಯ ಪದಗಳಲ್ಲಿ ತಳವಾರ ಪದವಿಲ್ಲ, ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಲ್ಲಿ ಹಾಗೂ ರಾಜ್ಯ ಬುಡಕಟ್ಟು ಅಧ್ಯಯನ ವಿಭಾಗ ಕೊಟ್ಟಿರುವ ವರದಿಯಲ್ಲೂ ತಳವಾರ್ ಪದವಿಲ್ಲ, ಆದರೆ ರಾಜ್ಯ ಸರಕಾರ ಇವತ್ತು ಇನ್ನೊಬ್ಬರ ಹಿತ ಕಾಪಾಡಲು, ತಳವಾರ ಸಮಾಜವು ಕೋಲಿ ಸಮಾಜಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿ ಗೊಂದಲ ಸೃಷ್ಟಿಸಿ ಸಂವಿಧಾನಾತ್ಮಕವಾದ ನಮ್ಮ ಹಕ್ಕನ್ನು ಕಿತ್ತುಕೊಳ್ಳುತ್ತದೆ ಎಂದು ಆರೋಪಿಸಿದರು.

ನಂತರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ತಳವಾರ ಎಸ್‌.ಟಿ ಹೋರಾಟ ಸಮಿತಿ ಅಧ್ಯಕ್ಷ ರಾಚಣ್ಣ ಎಚ್.ತಳವಾರ,ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿಠಲ ಬಿ.ಹರನೂರ, ಚಂದ್ರಕಾಂತ ಸಾಹುಕಾರ ಆಲೂರ, ಬಸವರಾಜಗೌಡ ಮಾಲಿ ಪಾಟೀಲ ಅರಳಗುಂಡಗಿ, ಶಂಕರಗೌಡ ಪಾಟೀಲ ಜಂಬೇರಳ, ವಿಠ್ಠಲ ಹರನೂರ ಸುಂಬಡ, ಮಲ್ಲಿಕಾರ್ಜುನ ಪಾಟೀಲ ಕಡಕೋಳ, ಕರಣ ಬಿರಾದಾರ, ಶರಣು ಕೋಳಿ, ಚಂದ್ರಶೇಖರ್ ವಕೀಲ, ದೇವು ದನ್ನೂರ, ಮಲ್ಲಿಕಾರ್ಜುನ ಹಂಗರಗಾ, ವಿಠ್ಠಲ್ ಕವಾಲ್ದಾರ್, ದೇವೇಂದ್ರ ಚಿಗರಹಳ್ಳಿ,ಡಾ.ಸರದಾರ ರಾಯಪ್ಪ,ರಾಜೇಂದ್ರ ರಾಜವಾಳ,ಸೈಬಣ್ಣಾ ಜಮದಾರ ಸೇರಿದಂತೆ ಇನ್ನು ಹಲವಾರು ತಳವಾರ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here