ಕಲಬುರಗಿ: ನಗರದ ಹಳೆ ಬ್ರಹ್ಮಪೂರ್ ಬಡಾವಣೆಯ ಅಜಾದ್ ಚೌಕ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ಚಜಾರೋಹಣ ಕಾರ್ಯಕ್ರಮ ಜರುಗಿತು.
ಭಾರತ ಮಾತಾಂಬೆಯ ಭಾವಚಿತ್ರಕ್ಕೆ ಈರಯ್ಯ ಬಂದರವಾಡ ರವರು ಪೂಜೆಯನ್ನು ಸಲ್ಲಿಸಿದರು. ಆಜಾದ್ ತರುಣ ಸಂಘದ ಹಿರಿಯ ಸದಸ್ಯರಾದ ರತನ್ ಚಂದ್ ಕಾಸರ್ ರವರು ಧ್ವಜಾರೋಹಣ ನೆರವೇರಿಸಿದರು.
ಸಂಘದ ಅಧ್ಯಕ್ಷರಾದ ಕವಿ ರಾಜ್ ಕೋರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಗು ಹತ್ತಿ, ನ್ಯಾಯವಾದಿ ಜೇ. ವಿನೋದ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹಿರಿಯರ ತ್ಯಾಗ, ಬಲಿದಾನ ದಿಂದ ದೊರೆತ ಸ್ವಾತಂತ್ರ್ಯ ನಮ್ಮ ಮಕ್ಕಳು ಉಳಿಸಿ ಕೊಂಡು ಹೋಗುವದೇ ಒಂದು ದೊಡ್ಡ ಹೋರಾಟವಾಗಿದ್ದು, ದೇಶದ ಪ್ರಗತಿ ಮಕ್ಕಳ ಕೈಯಲ್ಲಿ ಇದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ನಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಹೊನ್ನಪ್ಪ ಪೊಟ್ಟದ ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಧ್ಯಮದ ನೀತಿನ್ ಕಟ್ಟಿಮನಿ, ರಘು ರಾಜ್ ಜಮಾದರ್, ಅನಿಲ್ ಕುಮಾರ್, ರಾಘವೇಂದ್ರ, ತಿಪ್ಪಣ್ಣ ಬಾಳಿಕಾಯಿ, ಅಂಬರೀಷ್ ಪಡಿಶೆಟ್ಟಿ, ಸವಿರಾಜ್ ಕೋರಿ, ಬಡಾವಣೆಯ ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.