ಐಎಂಎ ರಾಜ್ಯ ಪುರಸ್ಕೃತ ಡಾ. ಗುಬ್ಬಿ ಅವರಿಗೆ ಸನ್ಮಾನ

0
65

ಕಲಬುರಗಿ: ಎಲ್ಲರೊಂದಿಗೆ ಒಂದಾಗಿ ಬರೆಯುವ ಡಾ. ಎಸ್.ಎಸ್. ಗುಬ್ಬಿಅವರು ಮೂಳೆತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಮಾಜದ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶರಣಬಸವೇಶ್ವರ ಪದವಿ ಕಾಲೇಜಿನ ಡಾ. ವೆಂಕಣ್ಣ ಡೊಣ್ಣೆಗೌಡರ ಅಭಿಪ್ರಾಯ ಪಟ್ಟರು.

ನಗರದ ಕಲಾ ಮಂಡಳದಲ್ಲಿ ಸಗರನಾಡು ಕ್ಷೇಮಾಭಿವೃದ್ಧಿ ಸಂಘ ಶನಿವಾರ ಹಮ್ಮಿಕೊಂಡಿದ್ದ ಐಎಂಎ ರಾಜ್ಯ ಪುರಸ್ಕಾರ ಪಡೆದ ಡಾ. ಎಸ್.ಎಸ್. ಗುಬ್ಬಿ ಅವರ ಸನ್ಮಾನ ಸಮಾರಂಭದಲ್ಲಿ ಗುಬ್ಬಿ ವ್ಯಕ್ತಿತ್ವ ಕುರಿತು ಮಾತನಾಡಿದರು.

Contact Your\'s Advertisement; 9902492681

ಗುಬ್ಬಿ ಅಡ್ಡ ಹೆಸರಿನ ಇವರು ಬಹಳ ವಿಶಾಲ ಹೃದಯ ಉಳ್ಳವರಾಗಿದ್ದಾರೆ. ದುಡ್ಡಿಗೆ ಪ್ರಾಮುಖ್ಯತೆ ಕೊಡದೆ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಅವರೊಳಗೆ ಒಬ್ಬ ಕವಿ, ಕಲಾವಿದ, ನಾಟಕಕಾರ ಇದ್ದಾನೆ ಎನ್ನುವುದಕ್ಕೆ ಈಗಾಗಲೇ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇದೆಲ್ಲದಕ್ಕೂ ಮುಖ್ಯ ಅವರು ಅಂತಃಕರಣಿ ಮನುಷ್ಯ ಇದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಪಿ.ಎಂ.‌ಮಣ್ಣೂರ ಮಾತನಾಡಿ, ಬಡವರ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ. ಗುಬ್ಬಿ ಅವರು ಸ್ನೇಹ ಶೀಲರಾಗಿದ್ದಾರೆ. ಅವರನ್ನು ಸನ್ಮಾನಿಸಿರುವುದು ‌ನನಗೆ ಖುಷಿ ತಂದಿದೆ ಎಂದು ಹೇಳಿದರು. ಲೇಖಕ ಡಾ.‌ಈಶ್ವರಯ್ಯ ಮಠ ಮಾತನಾಡಿ, ತಾವು ಕಷ್ಟದಲ್ಲಿದ್ದರೂ ಇನ್ನೊಬ್ಬರಿಗೆ ಸಹಾಯ, ಸೇವೆ ಮಾಡುವ ಗುಣ ಹೊಂದಿರುವ ಗುಬ್ಬಿ ಅವರು ಸಜ್ಜನ ವ್ಯಕ್ತಿ ಎಂಬುದು ಬಹಳ ಮಹತ್ವದ ಸಂಗತಿಯಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗುಬ್ಬಿ ಅವರು ನಿಮ್ಮೆಲ್ಲರ ಸಹಾಯ, ಸಹಕಾರದಿಂದ ನಾನು ಈ ಮಟ್ಟಕ್ಕೆ ಬಂದಿದ್ದು, ಸಮಾಜದ ಕಾಳಜಿ ವಹಿಸುವುದು ಅಗತ್ಯ ಎಂದು ನಾನು ಭಾವಿಸಿದ್ದೇನೆ ಎಂದರು. ಪ. ಮಾನು ಸಗರ ಅಧ್ಯಕ್ಚತೆ ವಹಿಸಿದ್ದರು. ಡಾ. ಎಸ್.ಎಸ್. ಗುಬ್ಬಿ ವೇದಿಕೆಯಲ್ಲಿದ್ದರು.

ಪ್ರೊ. ಎಸ್.ಎಲ್. ಪಾಟೀಲ,ಡಾ ಕೆ.ಎಸ್.ಬಂಧು, ಸಿ.ಎಚ್. ಬೇನಾಳ, ನರಸಿಂಗರಾವ ಹೆಮನೂರ, ವಿ.ಸಿ. ನೀರಡಗಿ, ಬಸಲಿಂಗಪ್ಪ ಆಲ್ಹಾಳ, ಬಿ.ಎಚ್. ನಿರಗುಡಿ, ಡಾ. ಚಿ.ಸಿ.
ನಿಂಗಣ್ಣ, ಗುರುಬಸಪ್ಪ ಪಾಟೀಲ ಇತರರು ಇದ್ದರು. ಜಿ.ಜಿ. ವಣಿಕ್ಯಾಳ ನಿರೂಪಿಸಿದರು. ‌ಡಾ.‌ ಶಶಿಶೇಖರರೆಡ್ಡಿ ಪರಿಚಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here