ಕೊರೋನಾ ನಿಯಂತ್ರಣಕ್ಕಾಗಿ ಸರಕಾರ ತನ್ನ ಬದ್ಧತೆ ತೋರಿಸುವಲ್ಲಿ ವಿಫಲ : ಶಾಸಕ ಪ್ರಿಯಾಂಕ್ ಖರ್ಗೆ

0
49

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೊರೋನಾ ವೈರಸ್ ತಡೆಗೆ ರಾಜ್ಯ ಸರಕಾರ ತನ್ನ ಬದ್ದತೆ ತೋರಿಸುವಲ್ಲಿ ವಿಫಲವಾಗಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅರೋಗ್ಯ ಹಸ್ತ ಕಾರ್ಯಕ್ರಮದ ರೂಪುರೇಷಗಳ ಕುರಿತು ಸರಕಾರದ ಮುಖ್ಯ ಸಚೇತಕರಾದ ಅಜಯ್ ಸಿಂಗ್ ಅವರೊಂದಿಗೆ ಜಂಟಿ‌ ಪತ್ರಿಕೋಷ್ಟಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕೊವೀಡ್ ನಿಂದಾಗಿ ದೇಶದಲ್ಲಿಯೇ ಮೊಟ್ಟ ಮೊದಲ ಸಾವು ಕಲಬುರಗಿ ಯಲ್ಲಿ ಸಂಭವಿಸಿದೆ. ಆ ನಂತರ ಸುಮಾರು‌140 ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದರು. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾದರು. ಈ ಸೋಂಕು ಕಂಡು ಬಂದ ನಂತರ ಸೋಂಕು ಪತ್ತೆ ಕೇಂದ್ರ ಸ್ಥಾಪನೆ ಮಾಡಿ ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದ ನಂತರ ಒಂದು ಕೇಂದ್ರ ಸ್ಥಾಪಿಸಿದ್ದು ಬಿಟ್ಟರೇ ಮತ್ತೊಂದು ಕೇಂದ್ರ ಸ್ಥಾಪಿಸಲಿಲ್ಲ. ಇಷ್ಟೆಲ್ಲ ಆದ ನಂತರ ಈಗ ಸಹಾಯವಾಣಿ ಸ್ಥಾಪಿಸಿದ್ದಾರೆ. ಸಹಾಯವಾಣಿ ಸ್ಥಾಪಿಸಲು ಇಷ್ಟೊಂದು ಕಾಲಾವಕಾಶ ಬೇಕಾಯ್ತಾ? ಇದು ಸರಕಾರ ತನ್ನ ಬದ್ದತೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದೇ ಹೇಳಬೇಕಾಗುತ್ತದೆ ಎಂದರು.

ಸಹಾಯವಾಣಿಗೆ ತಗುಲುವ ತಿಂಗಳ ವೆಚ್ಚ ರೂ. ಒಂದು ಲಕ್ಷವನ್ನು ಕೆಕೆಆರ್ ಡಿಬಿ ಅನುದಾನದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಯಾಕೆ ಜಿಲ್ಲಾಡಳಿತ ಬಳಿ ಹಣದ ಕೊರತೆ ಇದೆಯಾ? ಕೆಕೆಆರ್ ಡಿಬಿ ಅನುದಾನ ಮೂಲಭೂತ ಸೌಲಭ್ಯ ಅಭಿವೃದ್ದಿಗೆ ಬಳಸಬೇಕು. ಆರೋಗ್ಯ ವ್ಯವಸ್ಥೆ ಸುಧಾರಿಸುವಲ್ಲಿ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಜವಾಬ್ದಾರಿಯುತ ವಿರೋಧಪಕ್ಷವಾಗಿ ಸರಕಾರ ತನ್ನ ಜವಾಬ್ದಾರಿ‌ ನಿಭಾಯಿಸುವಲ್ಲಿ ವಿಫಲವಾದಾಗ ನಾವು ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಜಾರಿಗೆ ತರುವ ಮೂಲಕ ನಮ್ಮ ಪಕ್ಷದ ವಾರಿಯರ್ಸ್ ಗಳ ಮನೆ ಮನೆಗೆ ಭೇಟಿ‌ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುತ್ತೇವೆ. ಹಾಗೊಂದು ವೇಳೆ ಸಾರ್ವಜನಿಕರ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಆ ಕುರಿತು ಸ್ಥಳಿಯ ಆಡಳಿತದೊಂದಿಗೆ ಸಹಕರಿಸಿ ಮುಂದಿನ ಆರೋಗ್ಯ ವ್ಯವಸ್ಥೆ ಕುರಿತು ಸೂಕ್ತ ಸಲಹೆ ನೀಡಲಾಗುತ್ತಿದೆ ಎಂದರು.

ಈ ಮುನ್ನ ಮಾತನಾಡಿದ ಶಾಸಕ ಅಜಯ್ ಸಿಂಗ್ ಅವರು ಆರೋಗ್ಯ ಹಸ್ತದಂತ ವಿನೂತನ ಕಾರ್ಯಕ್ರಮದ ಮೂಲಕ ಕೆಪಿಸಿಸಿಯ ಸುಮಾರು 15000 ಕೊರೋನಾ ವಾರಿಯರ್ಸ್ ರಾಜ್ಯದ 7400 ಗ್ರಾಮ ಪಂಚಾಯತಿ ಹಾಗೂ ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ವಾರಿಯರ್ಸ್ ಗೆ ಸ್ಯಾನಿಟೈಜರ್, ಫಿವರ್ ಸ್ಕ್ರೀನಿಂಗ್, ಉಸಿರಾಟದ ತಪಾಸಣೆ ಯಂತ್ರ, ಮಾಸ್ಕ್ ಇತ್ಯಾದಿ ಸೌಲಭ್ಯ ಒದಗಿಸಲಾಗುತ್ತಿದ್ದ ಅವುಗಳನ್ನು ಬಳಸಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ‌ಕೊರೋನಾ ವಾರಿಯರ್ಸ್ ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಒಂದು‌ಲಕ್ಷ ರೂಪಾಯಿ ವಿಮೆ ಮಾಡಲಾಗುವುದು ಎಂದರು.

ಆರೋಗ್ಯ ಹಸ್ತ ಕಾರ್ಯಕ್ರಮ ಪ್ರಾಯೋಗಿಯಕಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರದಿಂದ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಕಚೇರಿಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ, ಡಾ ಕಿರಣ್ ದೇಶಮುಖ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here