ಅಬಕಾರಿ ದಾಳಿ: 5 ಲೀಟರ್ ಕಳ್ಳ ಭಟ್ಟಿ ಸರಾಯಿ ಜಪ್ತಿ

0
43

ಕಲಬುರಗಿ: ಚಿತ್ತಾಪೂರ ತಾಲೂಕಿನ ಭೀಮನಳ್ಳಿ ತಾಂಡದ ಜೈನಾಬಾಯಿ ಗಂಡ ಸೇವು ರಾಠೋಡ ಎಂಬುವರ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿ 130 ಲೀಟರ ಬೆಲ್ಲದ ಕೊಳೆ ನಾಶಪಡಿಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಲೀಟರ ಕಳ್ಳಭಟ್ಟಿ ಸರಾಯಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ಚಿತ್ತಾಪೂರ ವಲಯದ ಅಬಕಾರಿ ಉಪ ನಿರೀಕ್ಷಕರು ತನಿಖೆ ಮುಂದುವರೆಸಿರುತ್ತಾರೆ ಎಂದು ಕಲಬುರಗಿ ವಿಭಾಗದ ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.

ಶಹಾಬಾದ ಪಟ್ಟಣದ ಡಕ್ಕಾ ತಾಂಡಾ ಸ್ಟೇಷನ ತಾಂಡಾ, ವಾಡಿ ಪಟ್ಟಣ ಮತ್ತು ಚಿತ್ತಾಪೂರ ಪಟ್ಟಣದ ಹಲವಾರು ಕಡೆ ದಾಳಿ ನಡೆಸಿ ಪರಿಶೀಲಿಸಲಾಯಿತು.

Contact Your\'s Advertisement; 9902492681

ಅದೇ ರೀತಿ ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಎಸ್.ಕೆ. ಕುಮಾರ ಹಾಗೂ ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಅಬಕಾರಿ ಉಪ ಅಧೀಕ್ಷಕ ಮಹ್ಮದ ಇಸ್ಮಾಯಿಲ ಇನಾಮದಾರ ಹಾಗೂ ಚಿತ್ತಾಪೂರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ ರಾಂಪೂರೆ, ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ವಿಠ್ಠಲರಾವ ಎಂ. ವಾಲಿ, ಕಲಬುರಗಿ ವಲಯ ನಂ.1 ರ ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದಕಣ್ಣ ಹಾಗೂ ವಲಯ ನಂ. 2ರ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಅವರ ನೇತೃತ್ವ ಹಾಗೂ ಸಿಬ್ಬಂದಿಯೊಂದಿಗೆ ಇತ್ತೀಚೆಗೆ ಕಲಬುರಗಿಯ ಭರತನಗರ, ಮಂಗಾರವಾಡಿ ಹಾಗೂ ಸಣ್ಣೂರು ತಾಂಡಾ, ಆಶ್ರಯ ಕಾಲೋನಿ ಫಿಲ್ಟರ್‍ಬೆಡ್ ತಾಂಡದಲ್ಲಿ ಪದೇ ಪದೇ ಅಕ್ರಮ ಮದ್ಯ ಕಳ್ಳಭಟ್ಟಿ ಸರಾಯಿ ಮತ್ತು ಬೆಲ್ಲದಕೊಳೆ ಸಂಗ್ರಹಣೆಯ ಕೇಂದ್ರಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು. ಯಾವುದೇ ಅಕ್ರಮಗಳು ಕಂಡು ಬಂದಿರುವುದಿಲ್ಲ.

ಈ ಹಳೆಯ ಕಳ್ಳಭಟ್ಟಿ ಆರೋಪಿಗಳು ಹಾಗೂ ಅವರ ಮನೆಗಳನ್ನು ಪರಿಶೀಲನೆ ಮಾಡಲಾಗಿದೆ. ಯಾವುದೇ ಅಕ್ರಮಗಳು ಕಂಡು ಬಂದಿರುವುದಿಲ್ಲ. ಅವರು ಕಳ್ಳಭಟ್ಟಿ ಸರಾಯಿ ತಯಾರಿಕೆ ಬಿಟ್ಟು ಕೂಲಿ ಕೆಲಸದಲ್ಲಿ ತೊಡಗಿರುತ್ತಾರೆ. ದಾಳಿ ಸಮಯದಲ್ಲಿ ಯಾವುದೇ ಪರಿಕರಗಳನ್ನು ದೊರೆತಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here