ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

0
142

ಸುರಪುರ: ಕಲಬುರ್ಗಿ ಜಿಲ್ಲೆಯ ಕಮಲಾಪುರ ಬಳಿಯ ದಸ್ತಾಪುರದಲ್ಲಿ ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾಣಿಸಿದ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಹಾಗು ನಾಗರಾಳ ಗ್ರಾಮದಲ್ಲಿನ ದಲಿತರ ಮೇಲಿನ ಹಲ್ಲೆ ಖಂಡಿಸಿ ದಲಿತ ಸಾಮೂಹಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ,ದೇಶದಲ್ಲಿ ದಲಿತರ ಮೇಲೆ ಹಲ್ಲೆ,ಕೊಲೆಗಳು ನಿತ್ಯವು ಜರಗುತ್ತಿವೆ,ಆದರೆ ಸರಕಾರಗಳು ಇಂತಹ ಘಟನೆಗಳ ತಡೆಯುವಲ್ಲಿ ಸಂಪೂರ್ಣ ವಿಫಲವಾಗಹಿವೆ.ಅಲ್ಲದೆ ದೇಶದಲ್ಲಿನ ಅನೇಕ ಮಹಾತ್ಮರ ಭಾವಚಿತ್ರ ಮತ್ತು ಪುತ್ಥಳಿಗಳಿಗೆ ಅಪಮಾನ ಮಾಡಲಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಲಬುರ್ಗಿ ಜಿಲ್ಲೆಯ ಕಮಲಾಪುರ ಬಳಿಯ ದಸ್ತಾಪುರ ಗ್ರಾಮದಲ್ಲಿ ಡಾ:ಬಾಬಾ ಸಾಹೇಬ ಅಂಬೇಡ್ಕರರ ಭಾವಚಿತ್ರಕ್ಕೆ ಅಪಮಾನಿಸಿದ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು.ಅಲ್ಲದೆ ಯಡ್ರಾಮಿ ತಾಲ್ಲೂಕಿನ ಮಳ್ಳಿಯ ನಾಗರಾಳ ಗ್ರಾಮದಲ್ಲಿ ದಲಿತರ ಮದುವೆ ಮೆರವಣಿಗೆ ಮೇಲೆ ಸವರ್ಣಿಯರು ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿ ಅನೇಕರನ್ನು ಗಾಯಗೊಳಿಸಿದ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ.ಈ ಘಟನೆ ನಡೆಸಿದವರನ್ನು ಸರಕಾರ ಇದುವರೆಗೆ ಬಂಧಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಕೂಡಲೆ ಹಲ್ಲೆ ನಡೆಸಿದ ಗೂಂಡಾಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿನ ದಲಿತ ಕುಟುಂಬದವರು ಮದುವೆ ಮೆರವಣಿಗೆ ನಡೆಸುವಾಗ ಊರೊಳಗೆ ಮೆರವಣಿಗೆ ಬರಬಾರದೆಂದು ಕೆಲವರು ಹಲ್ಲೆ ನಡೆಸಿದ್ದಾರೆ.ಇದರಿಂದ ಗ್ರಾಮದಲ್ಲಿನ ದಲಿತ ಕುಟುಂಬದವರು ಮನೆಯಿಂದ ಹೊಸಬರದ ಸ್ಥಿತಿ ನಿರ್ಮಾಣವಾಗಿದೆ.ಸ್ಥಳಿಯ ಶಾಸಕರು ಒಬ್ಬ ದಲಿತರಾಗಿದ್ದು ದಲಿತರ ಮೇಲಿನ ಹಲ್ಲೆಗೆ ಧ್ವನಿ ಎತ್ತಬೇಕು ಮತ್ತು ಗೆದ್ದಲಮರಿಯಲ್ಲಿನ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಭೀಮರಾಯ ಸಿಂಧಗೇರಿ,ರಾಹುಲ್ ಹುಲಿಮನಿ,ನಿಂಗಣ್ಣ ಗೋನಾಲ, ವೀರಭದ್ರ ತಳವಾರಗೇರಾ, ಹುಲಗಪ್ಪ ದೇವತ್ಕಲ್,ಶಿವಣ್ಣ ನಾಗರಾಳ, ನಾಗು ಗೋಗಿಕೇರಾ,ಖಾಜಾಅ ಅಜ್ಮೀರ್,ತಾಯಪ್ಪ ದೊಡ್ಮನಿ,ಹೊನ್ನಪ್ಪ ಕೊಡೆಭಾವಿ, ಹಣಮಂತ ರತ್ತಾಳ,ಅರುಣಕುಮಾರ,ಹಣಮಂತ ಚಲುವಾದಿ,ರಮೇಶ ಬಡಿಗೇರ,ಹಸನಪ್ಪ ತಳವಾರ,ವೆಂಕಟೇಶ ಬಡಿಗೇರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here