ಹಿಂದು ಸಂಘಟನೆಯ ಶಿವಕುಮಾರ ಸಾವು ಖಂಡಿಸಿ ಉಪ್ಪಾರ ಸಮಾಜ ಪ್ರತಿಭಟನೆ

0
74

ಸುರಪುರ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದಲ್ಲಿ ಅನುಮಾನಾಷ್ಪದವಾಗಿ ಸಾವಿಗೀಡಾಗಿರುವ ಯುವಕ ಶಿವಕುಮಾರ ಉಪ್ಪಾರ ಸಾವು ಖಂಡಿಸಿ ಸುರಪುರ ತಾಲ್ಲುಕು ಉಪ್ಪಾರ ಸಮಾಜದ ಸಂಘಟನೆಯಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲುಕು ಉಪ್ಪಾರ ಸಂಘದ ಅಧ್ಯಕ್ಷ ಭೀಮಣ್ಣ ಚಿಕ್ಕನಹಳ್ಳಿ ಮಾತನಾಡಿ,ಗೋಕಾಕ ತಾಲ್ಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದ ಯುವಕ ಶಿವಕುಮಾರ ಉಪ್ಪಾರ ಓರ್ವ ಹಿಂದುಪರ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿದ್ದು ಗೋವುಗಳ ಕಳ್ಳಸಾಗಣೆಯನ್ನು ವಿರೋಧಿಸಿದ್ದರಿಂದ ಶಿವಕುಮಾರನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.ಶಿವಕುಮಾರ ಸಾವಿನಿಂದ ಅವರ ಕುಟುಂಬಕ್ಕೆ ತೀವ್ರ ನಷ್ಟವುಂಟಾಗಿದೆ.

Contact Your\'s Advertisement; 9902492681

ಶಿವಕುಮಾರ ಕೊಲೆಯನ್ನು ತಾಲ್ಲುಕು ಉಪ್ಪಾರ ಸಂಘವು ತೀವ್ರವಾಗಿ ಖಂಡಿಸುತ್ತದೆ,ಅಲ್ಲದೆ ಶಿವಕುಮಾರ ಸಾವಿಗೆ ಕಾರಣರಾದವರನ್ನು ಸರಕಾರ ಕೂಡಲೆ ಬಂಧಿಸಬೇಕು,ಯುವಕನ ಕೊಲೆಯ ಹಿಂದೆ ಯಾವುದೆ ಶಕ್ತಿಗಳ ಕೈವಾಡವಿದ್ದರು ಸರಕಾರ ಅದನ್ನು ಕಂಡುಹಿಡಿದು ಶಿಕ್ಷೆಗೊಳಪಡಿಸಬೇಕು.ಅಲ್ಲದೆ ಶಿವಕುಮಾರನ ಕುಟುಂಬಕ್ಕೆ ಪರಿಹಾರ ನಿಡಬೇಕು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಉಪ್ಪಾರ ಜನಾಂಗದ ಮೇಲೆ ಪದೆ ಪದೆ ಹಲ್ಲೆಗಳಾಗುತ್ತಿದ್ದು ಸರಕಾರ ನಿರ್ಲಕ್ಷ್ಯ ವಹಿಸದೆ ಸಮಾಜದ ಮೇಲಿನ ಹಲ್ಲೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಮಂಜುನಾಥ ಧರಣಿ,ಗೊವಿಂದರಾಜ ಶಹಾಪೂರಕರ್, ವೆಂಕಟೇಶ ಗದ್ವಾಲ,ರವಿ ರುಕ್ಮಾಪುರ,ದೇವಿಂದ್ರಪ್ಪ ಸಾಹು ವಾಗಣಗೇರಾ,ಡಾ:ಮುಕುಂದ ಯಾನಗುಂಟಿ,ನಿಂಗಪ್ಪ ಕನ್ನೆಳ್ಳಿ,ಹಣಮಂತ್ರಾಯ ಚಿಗರಿಹಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here