ಶಹಾಬಾದ:ನಗರದಲ್ಲಿ ಅಸ್ಪೃಶ್ಯ ಸಮುದಾಯದ ವತಿಯಿಂದ ರವಿವಾರ ಆಯೋಜಿಸಲಾದ ಸಭೆಯಲ್ಲಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ನೂತನ ತಾಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ತಾಲೂಕಾಧ್ಯಕ್ಷ ಡಿ.ಡಿ.ಓಣಿ, ಸ್ಪ್ಪಶ್ರ್ಯ ಜಾತಿಗಳಾದ ಲಂಬಾಣಿ,ಭೋವಿ ವಡ್ಡರ್, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ತೆಗೆಯುವ ನಿಟ್ಟಿನಲ್ಲಿ ಬಹು ದೊಡ್ಡ ಹೋರಾಟ ಮಾಡುವ ಅವಶ್ಯಕತೆಯಿದೆ.ಆದ್ದರಿಂದ ಅಸ್ಪೃಶ್ಯ ಸಮುದಾಯದವರಾದ ನಾವೆಲ್ಲರೂ ಒಂದಾಗುವ ಅಗತ್ಯವಿದೆ. ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸ್ಪಶ್ರ್ಯ ಸಮುದಾಯದವರು ಕಬಳಿಸುತ್ತಿದ್ದಾರೆ. ಅಸ್ಪೃಶ್ಯ ಜಾತಿಗಳಾದ ಪರಿಶಿಷ್ಟ ಜಾತಿ(ಹೊಲೆಯ) ಮತ್ತು ಮಾದಿಗರಿಗೆ ಮಾತ್ರ ಮೀಸಲಾತಿಯನ್ನು ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.ಆದರೆ ಸರಕಾರ ಮಾತ್ರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಪರಿಶಿಷ್ಟ ಜಾತಿಗಳಾದ ಹೊಲೆಯ,ಮಾದಿಗ, ಸಮಗಾರ, ಡೋಹರ ಸಮಾಜದ ಬಂಧುಗಳಿಗೆ ಸಿಗಬೇಕಾದ ಮೀಸಲಾತಿಯ ಸವಲತ್ತುಗಳು ಸಿಗಬೇಕಾದರೆ ನಾವೆಲ್ಲರೂ ಒಂದಗೂಡಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ ಎಂದರು.
ಸಭೆಯಲ್ಲಿ ಶಿವರಾಜ ಕೋರೆ, ಚಂದ್ರಕಾಂತ ಗೊಬ್ಬೂರಕರ್,ರವಿ.ಎನ್.ಬೆಳಮಗಿ, ನಾಗರಾಜ ಸಿಂಘೆ, ಕೃಷ್ಣಪ್ಪ ಕರಣಿಕ್, ಮಹಾದೇವ ತರನಳ್ಳಿ,ರಮೇಶ ಜೋಗದನಕರ್,ಭೀಮರಾಯ ಕನಗನಹಳ್ಳಿ, ಎಂ.ಆರ್.ದೊಡ್ಡಮನಿ,ಉಮೇಶ ಪೊಚ್ಚಟ್ಟಿ, ಮಹಾದೇವ ಜೋಗದನಕರ್,ಮರೆಪ್ಪ ತೆಗನೂರ,ಸತೀಶ ಕೋಬಾಳಕರ್ ಇತರರು ಇದ್ದರು.
ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ನೂತನ ತಾಲೂಕಾ ಪದಾಧಿಕಾರಿಗಳು
ಅಧ್ಯಕ್ಷ- ಡಿ.ಡಿ.ಓಣಿ, ಗೌರವಾಧ್ಯಕ್ಷ-ಶಿವರಾಜ ಕೋರೆ, ಉಪಾಧ್ಯಕ್ಷರಾಗಿ-ಚಂದ್ರಕಾಂತ ಗೊಬ್ಬೂರಕರ್,ರವಿ.ಎನ್.ಬೆಳಮಗಿ, ಕಾರ್ಯಾಧ್ಯಕ್ಷ-ನಾಗರಾಜ ಸಿಂಘೆ,ಪ್ರಧಾನ ಕಾರ್ಯದರ್ಶಿ-ಕೃಷ್ಣಪ್ಪ ಕರಣಿಕ್,ಸಂಘಟನಾ ಕಾರ್ಯದರ್ಶಿ-ಮಹಾದೇವ ತರನಳ್ಳಿ,ರಮೇಶ ಜೋಗದನಕರ್, ಖಜಾಂಚಿ-ಭೀಮರಾಯ ಕನಗನಹಳ್ಳಿ,ಕಾನೂನು ಸಲಹೆಗಾರ-ಎಂ.ಆರ್.ದೊಡ್ಡಮನಿ,ಉಮೇಶ ಪೊಚ್ಚಟ್ಟಿ ನೇಮಕಗೊಂಡಿದ್ದಾರೆ.