ವಿದ್ಯಾರ್ಥಿಗಳು ಮೌಲ್ಯವನ್ನು ಇಟ್ಟುಕೊಂಡು ಬದುಕಬೇಕಿದೆ: ದಳಪತಿ

0
134

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಪಾವಟೆನಗರ ಧಾರವಾಡದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಸತಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ.ಎಮ್.ಬಿ ದಳಪತಿ ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ ಕರ್ನಾಟಕ ಕಾಳೇಜು ಧಾರವಾಡ ಮಾತನಾಡಿ,  ನಾವು ವ್ಯಕ್ತಿಯಾಗಿ ಮಾತ್ರ ಬದುಕಬಾರದು, ವ್ಯಕ್ತಿತ್ವವನ್ನು ರೂಪಿಸಿಕೊಂಡು ಬದುಕಬೇಕು, ಇಂದಿನ ವಿದ್ಯಾರ್ಥಿ ಯುವ ಜನರಿಗೆ ತಂದೆ ತಾಯಿಗಳು ಆದರ್ಶವಾಗಬೇಕಿದೆ. ನಮಗಾಗಿ ತಂದೆ ತಾಯಂದಿರೂ  ಹೊಲದಲ್ಲಿ ದುಡಿದು ಬೆವರು ಸುರಿಸಿ ನಮ್ಮನ್ನ ಕಲಿಸುತ್ತಿದ್ದಾರೆ. ಹಾಸ್ಟೇಲ್ ಜೀವನ ತುಂಬಾ ಅಮೂಲ್ಯವಾದುದು, ಮೌಲ್ಯವನ್ನು ಇಟ್ಟುಕೊಂಡು ಬದುಕುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

Contact Your\'s Advertisement; 9902492681

ಇಷ್ಟಪಟ್ಟರೆ ನಾವು ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ರವಿ.ಡಿ.ಷೆನ್ನಣ್ಣವರ್ ನಮಗೆ ಜದವಲಂತ ಉದಾಹರಣೆ, ಹಾಗಾಗಿ ನಾವು ಕೂಡ ಅಂದುಕೊಂಡದ್ದನ್ನು ಸಾಧಿಸಬಹುದು. ನಾವು ಸಾಧನೆ ಮಾಡಬೇಕು ಸಾಧಕರಾಗಬೇಕು. ಸಧಬೆ ಮಾಡುವ ಸಂದರ್ಭದಲಿ ಕಷ್ಠ ಅಂತ ನೆಪವನ್ನು ಹೇಳಬಾರದು. ಕಷ್ಠ ಎಲ್ಲರಿಗೂ ಇದ್ದದ್ದೆ ಅವುಗಳನ್ನ ಮೆಟ್ಟಿ ನಿಂತು ನಾವು ಕೂಡ ಮನಸ್ಸು ಮಾಡಿ ಸಾಧನೆ ಮಾಡೋದಕ್ಕೆ ಹಾತೊರೆಯಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಸತಿ ನಿಲಯದ ಪಾಲಕರಾದ ಶ್ರೀ ದ್ಯಾವಪ್ಪ ಹೊಸುರ ಮಾತನಾಡಿ, ನಿಮ್ಮ ಒಂದು ಗುರಿ ಉನ್ನತ ವಿಚಾರದಿಂದ ಕೂಡಿರಲಿ, ವಸತಿ ನಿಲಯ ಬದುಕಿನ ಪಾಠವನ್ನು ಕಲಿಸುವಂತದ್ದು, ಸ್ವಾಭಿಮಾನದ ಮತ್ತು ಸಾಮಾಜೀಕರಣದ ಪಾಠವನ್ನು ವಸತಿ ನಿಲಯದಲ್ಲಿ ಕಲಿಯುತ್ತೇವೆ. ಹಾಸ್ಟೆಲನಿಂದ ಹೋಗುವಾಗ ಒಳ್ಳೆಯ ವಿಚಾರಗಳನ್ನ ತೆಎದುಕೊಂಡು ನಿಮ್ಮ ಒಂದು ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಿ, ಉತ್ತಮ ಪ್ರತಿಭೆಗಳು ಇರುವುದು ಹಳ್ಳಿಗಳಲ್ಲೆ ಹೆಚ್ಚು, ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕಿರಿಸಿದವರು ಹಳ್ಳಿಯ ಬಂದ ವ್ಯಕ್ತಿಗಳೇ ನಿವು ಕೂಡ ಸಾಕಷ್ಟು ವಿದ್ಯಾರ್ಥಿಗಳು ಹಳ್ಳಿಯಿಂದ ಬಂದವರೇ ಆಗಿದ್ದೀರಾ ಹಾಗಾಗಿ ನೀವೂ ಕೂಡ ಸಮಾಜದಲ್ಲಿ ಉನ್ನತವಾದ ಸಾಧನೆ ಮಾಡಿ ಎಂದು  ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ ಶ್ರೀ ಸಿ.ಬಿ ಮುರನಾಳ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು. ಹಾಸ್ಟೇಲ್ ನಾಯಕ ಈರಣ್ಣ ಕಳ್ಳಿ, ಉಪನಾಯ ಆನಂದ ಕುರಿಯವರ ಇದ್ದರು. ಹಾಸ್ಟೇಲನ ಅನೇಕ ವಿದ್ಯಾರ್ಥಿಗಳು ತಮ್ಮ ಒಂದು ವಿದ್ಯಾರ್ಥಿ ಜೀವನದ ಸವಿನೆನಪುಗಳು ಅನುಭವಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ವಿದ್ಯಾಥಿಗಳಾದ ಆನಂದ ಕುರಿಯರ, ಈರಣ್ಣ ಕಳ್ಳಿ, ಶಿವಶರಣ ಪರಪ್ಪಗೋಳ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿನಯ  ಪಾಲನಕg, ಶಿವಶರಣ ಪರಪ್ಪಗೋಳ, ಗಿರೀಶ್ ಪರವಣ್ಣಿ , ಮಲ್ಲು ಕುಂಬಾರ, ಮಹಾಂತೇಶ ಅಗಸರ, ಬಸನಗೌಡ, ಈರಣ್ಣ ಕಳ್ಳಿ, ಚನ್ನಗೌಡ, ಈರಣ್ಣ ಮೊರಬ, ಮಂಜುನಾಥ, ಹರೀಶ್, ನಾಗೇಶ, ಮುರುಗೇಶ್, ಚಂದ್ರು, ಶಿವರಾಜ್, ಮೊಹ್ಮದ್, ನಬಿಸಾಬ, ಅರುಣ, ಮುದುಕಪ್ಪ, ಸಿದ್ಧನಗೌಡ, ಎಮ್ ಗಣೇಶ್‌ಇತರರು ಇದ್ದರು. ವಿನಯ  ಪಾಲನಕರ್ ನಿರೂಪಿಸಿದರು. ಆನಂದ ಕುರಿಯವರ ವಂದಿಸಿದರು. ಗಿರೀಶ್ ಪರವಣ್ಣಿ  ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here