ಸಾಧನೆ ಮಾಡಿದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನ

0
78

ಕಲಬುರಗಿ: ಭಾರತ ದೇಶದ ಸ್ವಾತಂತ್ರ ದಿನಾಚರಣೆ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮಾಜಿ ಸೈನಿಕರ ಸಂಘ ನಗರದ ಅನುಪೂರ್ಣ ಕ್ರಾಸ್ ನಲ್ಲಿರುವ ಕಲಾ ಮಂಡಲದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಧನೆ ಮಾಡಿದ ಮಾಜೀ ಸೈನಿಕರ ಮಕ್ಕಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತು.

ದೇಶದ ಪ್ರಥಮ ಸೈನಾ ಪಡೆಯನ್ನು ತಯಾರು ಮಾಡಿದ ಕಟ್ಟಿಬೆಳೆಸಿದ ಸ್ವತಂತ್ರ ಯೋಧ ಸುಭಾಷ್ಚಂದ್ರಬೋಸ್ ಅವರ ಭಾವಚಿತ್ರಕ್ಕೆ ವಿಭಾಗದ ಆರ್ ಎಸ್ ಎಸ್ ಪ್ರಮುಖ್ ಕೃಷ್ಣಜಿ ಜೋಶಿ ಪೂಜೆ ಸಲ್ಲಿಸಿ, ಸಾಧನೆ ಮಾಡಿದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯಕಾಗಿ ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಸುಭಾಷ್ ಚಂದ್ರ ಬೋಸ್ ವೀರ ಸವರ್ಕರ್ ಭಗತ್ ಸಿಂಗ್ ಸುಖದೇವ್ ರಾಜಗುರು ಎಲ್ಲರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ, ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕರ್ತವ್ಯ ಭಾರತೀಯರ ಮೇಲೆ ಇದೆ, ಭಾರತ ವಿಶ್ವ ಗುರು ವಾಗುದತ್ತ ಭಾರತ ಸಾಗುತ್ತಿರುವ ವಳೆಯ ಬೆಳವಣಿಗೆ ದೇಶ ಇನ್ನಷ್ಟು ಬಲಿಷ್ಠವಾದ ಬೇಕಾದರೆ ನಾವೆಲ್ಲ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಮಾಜಿ ಸೈನಿಕರ ಮಕ್ಕಳಾದ ಅನುಜ ಕಲ ಗೌಡ, ವೈಷ್ಣವಿ ಪಾಟೀಲ್ ಹಾಗೂ ಭರತ ನಾಟ್ಯ ಪ್ರದರ್ಶಿಸಿದ ಆಶಾರಾಣಿ ಜಾಲಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ, ಕಾರ್ಯಕಾರಣಿ ಸದಸ್ಯರಾದ ಚಂದನ ಹಾರಕೂಡೆ, ಮಂಜುನಾಥ್ ಅಂಕಲಗಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು .

ಕೆ ಕೃಷ್ಣ ಚೈನಿಕ ಬೋರ್ಡ್ ಅಧಿಕಾರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಶರಣಪ್ಪ ಭೋಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕರಾದ ಎಸ್ ವಿ ಶೆಟ್ಟಿ ,ರಾಮಪ್ಪ ಸಿ ಮಗ್ಗಿ ,ನಿರ್ವಸ ಪವಾರ್, ರಾಮು ಪವಾರ್, ಶಿವಶಂಕರ್ ಪಾಟೀಲ್, ಅಪ್ಪ ರಾವ್ ಪಾಟೀಲ್, ಪ್ರದೀಪ್ ಕುಲ್ಕರ್ಣಿ, ಹೂಣಚಪ್ಪ ಎಸ್ ಚೌಹಾನ್ ಹಾಗೂ ಸೈನಿಕ ಕುಟುಂಬ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here