ಕಲಬುರಗಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್-19 ಸೊಂಕಿನಿಂದ ಗುಣಮುಖರಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.
ಈ ಪ್ರಯುಕ್ತ ಬೋರಿಂಗ್ ಆಸ್ಪತ್ರೆಯ ಡಾ. ಹಾಗೂ ಬ್ರಾಡವೆ ಆಸ್ಪತ್ರೆಯ ಉಸ್ತುವಾರಿ ಡಾ.ಅಭಿಜಿತ ಅಲ್ಲಮಪ್ರಭು ಪಾಟೀಲ ಅವರು ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಆಸ್ಪತ್ರೆಯ ವ್ಯವಸ್ಥೆ ಮತ್ತು ಅಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಬಳಿಕ ಸಚಿವ ಶ್ರೀರಾಮುಲು ಅವರು, ಆಸ್ಪತ್ರೆಯಲ್ಲಿ ನನಗೆ ಉತ್ತಮ ಚಿಕಿತ್ಸೆ ದೊರಕಿದೆ. ಇಲ್ಲಿನ ವೈದ್ಯರು ನನಗೆ ಹೆಚ್ಚು ಕಾಳಜಿಯಿಂದ ನೋಡಿಕೊಂಡಿದ್ದಾರೆ ಎಂದು ಸಚಿವರು ಡೈರಿಯಲ್ಲಿ ಬರೆದರು.
ಬೋರಿಂಗ್ ಆಸ್ಪತ್ರೆಯ ಡೈರೆಕ್ಟರ್ ಕಮ್ ಡಿನ್‍ರಾದ ಡಾ.ಮನೋಜಕುಮಾರ ಮತ್ತು ಸಿಬ್ಬಂದಿ ವರ್ಗದವರು ಸಚಿವರಿಗೆ ಬೀಳ್ಕೊಟ್ಟರು.