ಕೊರೋನಾ ಸೋಂಕಿನಿಂದ ಕಲಬುರಗಿಯಲ್ಲಿ ಮತ್ತೆ 7 ಜನ ನಿಧನ

0
53

ಕಲಬುರಗಿ: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮತ್ತೆ 7 ಜನ ನಿಧನವಾಗಿರುವ ಬಗ್ಗೆ ಸೋಮವಾರ ವರದಿಯಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ಸಂತೋಷ ಕಾಲೋನಿಯ 70 ವರ್ಷದ ವೃದ್ಧ (P-137425) ಆ.1 ರಂದು ಆಸ್ಪತ್ರೆಗೆ ದಾಖಲಾಗಿ ಆ.7 ರಂದು ನಿಧನರಾಗಿದ್ದಾರೆ.ಐ.ಎಲ್.ಐ. ಹಿನ್ನೆಲೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಯ 52 ವರ್ಷದ ಪುರುಷ (P-141858) ಜು.16 ರಂದು ಆಸ್ಪತ್ರೆಗೆ ದಾಖಲಾಗಿ ಆ.3 ರಂದು ನಿಧನ ಹೊಂದಿದ್ದಾರೆ.

Contact Your\'s Advertisement; 9902492681

ಸೋಂಕಿನ ಮೂಲ ಪತ್ತೆಯಾಗದೆ ನರರೋಗದಿಂದ ಬಳಲುತ್ತಿದ್ದ ಕಲಬುರಗಿಯ ಬ್ರಹ್ಮಪುರ ಪ್ರದೇಶದ 62 ವರ್ಷದ ವೃದ್ಧ (P-174462) ಆ.3 ರಂದು ಆಸ್ಪತ್ರೆಗೆ ದಾಖಲಾಗಿ ಆ.13 ರಂದು ನಿಧನ.ಸೋಂಕಿನ ಮೂಲ ಪತ್ತೆಯಾಗದ ಕಲಬುರಗಿಯ ಜೆ.ಆರ್.ನಗರದ 54 ವರ್ಷದ ಪುರುಷ (P-194160) ಆ.14 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ಜಮ್ ಜಮ್ ಕಾಲೋನಿಯ 70 ವರ್ಷದ ವೃದ್ಧ (P-200742) ಆ.12 ರಂದು ಆಸ್ಪತ್ರೆಗೆ ದಾಖಲಾಗಿ ಆ.14 ರಂದು ನಿಧನರಾಗಿದ್ದಾರೆ.ತೀವ್ರ ಉಸಿರಾಟ ತೊಂದರೆಯಿಂದ ಕಲಬುರಗಿಯ ಬಸವೇಶ್ವರ ಕಾಲೋನಿಯ 34 ವರ್ಷದ ಪುರುಷ (P-205927) ಆ.11 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ತೀವ್ರ ಉಸಿರಾಟ ತೊಂದರೆಯಿಂದ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ 72 ವರ್ಷದ ವೃದ್ಧೆ (P-216633) ಆ.14 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನರಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here