ಕಲಬುರಗಿ: ಇಲ್ಲಿನ ಸರಕಾರಿ ಮುದ್ರಣ ವಿಭಾಗದ ಎಫ್.ಡಿ. ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಹ್ಮದ್ ರಹೇಮಾನ್ ಮಿರ್ಜಾ (50) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ನಿನ್ನೆ ಆಗಸ್ಟ್ 17 ರಂದು ಹೈದರಾಬಾದ್ ನ ಸನ್ ಶಾಹಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದು, ಇಬ್ಬರು ಹೆಣ್ಣು, ಓರ್ವ ಮಗು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಕೆ.ಬಿ.ಎನ್ ಟೈಮ್ಸ್ ಉರ್ದು ಪತ್ರಿಕೆಯ ಛಾಯಾಗ್ರಾಹಕರಾದ ಮಿರ್ಜಾ ಸರಫರಾಜ್ ಬೇಗ್ ಅವರ ಸಹೋದರರಾಗಿದ್ದು, ಮಹೇಬುಬ್ ನಗರದ ಖಬರಿಸ್ತಾನ್ ನಲ್ಲಿ ಮಗರಿಬ್ ನಮಾಜ್ ನಂತರ ಅಂತ್ಯಕ್ರಿಯೆ ನಡೆಯಿತು.
ಸಹೋದರನ ನಿಧನಕ್ಕೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.