ಮಾಸ್ಕ್ ಬಳಸಿ ತರಗತಿಗಳು ಪ್ರಾರಂಭಿಸಬೇಕು: ಶಾಂತಪ್ಪ ಹುಲಿಕಲ್

0
171

ಜೇವರ್ಗಿ: ರಾಜ್ಯಾದ್ಯಂತ ಶಿಕ್ಷಣ ಮಂತ್ರಿಗಳ ಆದೇಶದ ಮೇರೆಗೆ ಅನುದಾನಿತ ಮತ್ತು ಸರಕಾರಿ ಶಾಲೆಗಳಿಗೆ ವಠಾರ ಶಾಲೆ ಹಾಗೂ ಆನ್ಲೈನ್ ತರಗತಿಗಳು ಪ್ರಾರಂಭಿಸಲು ಎಲ್ಲಾ ಶಾಲೆ ಮುಖ್ಯಗುರುಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಂತಪ್ಪ ಹುಲಿಕಲ್ ಕ್ಷೇತ್ರಶಿಕ್ಷಣಾಧಿಕಾರಿಗಳು ತಿಳಿಸಿದರು.ವಠಾರ ಶಾಲೆ ಪ್ರಾರಂಭ ಮಾಡಲಾಗಿದೆ ಎಂದು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಪ್ಪ ಹುಲ್ಕಲ್ ತಿಳಿಸಿದ್ದಾರೆ.

ಎಲ್ಲಾ ತರಗತಿಗಳು ನಡೆಯಬೇಕು ಮಕ್ಕಳಿಗೆ ಯಾವುದೇ ರೀತಿ ತೊಂದರೆಗಳ ಆಗದಂತೆ ಮುಂಜಾಗೃತ ಕ್ರಮಗಳು ಶಾಲೆಯಲ್ಲಿ ಕೈಗೊಂಡ ಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಲಿಕೆಯಿಂದ ಮಕ್ಕಳು ಹಿಂದುಳಿಯಬಾರದು ಸರ್ಕಾರದ ಆದೇಶದ ಪ್ರಕಾರ ತಮ್ಮ ತಮ್ಮ ಊರುಗಳಲ್ಲಿ ಮಂದಿರಗಳು, ಸಮುದಾಯ ಭವನಗಳ ಆವರಣದಲ್ಲಿ ತರಗತಿ ಆರಂಭಿಸಬೇಕು ಎಂದು ಹೇಳಿದರು.

ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಜರ ಮತ್ತು ಮಾಸ್ಕ್ ಬಳಸಿ ತರಗತಿಗಳು ಪ್ರಾರಂಭಿಸಬೇಕೆಂದು ಆಯಾ ಶಾಲೆ ಮುಖ್ಯಗುರುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here