ಕಡ್ಲೆಪ್ಪ ಕೆರೆ ಸ್ವಚ್ಛಗೊಳಿಸಲು ಶೋಷಿತರ ಪರ ಹೋರಾಟಗಾರರ ಮನವಿ

0
51

ಸುರಪುರ: ನಗರದಲ್ಲಿ ಕುಡಿಯುವ ನೀರಿನ ತೊಂದರೆ ಹಾಗು ದಿನಬಳಕೆಯ ನೀರಿಗು ಅನೇಕ ಕಡೆಗಳಲ್ಲಿ ತೊಂದರೆಯಿದೆ.ಆದರೆ ಕುಡಿಯುವ ನೀರಿನ ತೊಂದರೆ ನಿವಾರಿಸಲು ಜನಪ್ರತಿನಿಧಿಗಳು ಮತ್ತು ನಗರಸಭೆ ಪ್ರಾಮಾಣಿಕ ಪ್ರಯತ್ನ ಮಾಡದೆ ನಿರ್ಲಕ್ಷ್ಯ ತೊರುತ್ತಿದೆ.ನಗರದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ನೀಗಿಸಲು ಕಡ್ಲೆಪ್ಪ ಕೆರೆಯನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಮತ್ತು ತಾಲ್ಲುಕು ಅಡಳಿತಕ್ಕೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.

ನಗರದ ಕಬಾಡಗೇರಾ ಬಳಿಯ ಅಗಸರ ಬಾವಿ ಬಳಿಯಿರುವ ಕಡ್ಲೆಪ್ಪ ಕೆರೆಯ ಬಳಿ ಹೋರಾಟ ನಡೆಸಿ ಮಾತನಾಡಿ,ಹತ್ತಾರು ಎಕರೆ ವಿಸ್ತೀರ್ಣ ಹೊಂದಿರುವ ಕಡ್ಲೆಪ್ಪ ಕೆರೆಯು ಹಲವಾರು ವರ್ಷಗಳಿಂದ ನಗರಸಭೆಯ ನಿರ್ಲಕ್ಷ್ಯಕ್ಕೊಳಗಾಗಿ ಇಡೀ ಕೆರೆ ಜಾಲಿ ಕಂಟಿಗಳಿಂದ ಮುಚ್ಚಿದೆ.ಅಲ್ಲದೆ ಕೆರೆಯಲ್ಲಿ ನಿಂತ ನೀರು ಕೊಳಕಾಗಿ ನಾರುತ್ತಿವೆ,ನೀರಿನಲ್ಲಿ ರೋಗಣುಗಳು ತುಂಬಿದ್ದು ಇದರಿಂದ ಕೆರೆಯ ಸುತ್ತ ಮುತ್ತಲಿನ ಜನರಲ್ಲಿ ರೋಗದ ಭೀತಿಯನ್ನು ಹುಟ್ಟುಹಾಕಿದೆ.ನಗರಸಭೆ ಈ ಕೆರೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಇದನ್ನು ಖಂಡಿಸುತ್ತೇವೆ.

Contact Your\'s Advertisement; 9902492681

ಕೂಡಲೆ ನಗರಸಭೆ ಮತ್ತು ತಾಲ್ಲುಕು ಆಡಳಿತ ಕೆರೆಯ ಸ್ವಚ್ಛತೆಗೆ ಮುಂದಾಗಬೇಕು.ಕೆರೆಯನ್ನು ಸ್ವಚ್ಛಗೊಳಿಸಿ ನೀರು ನಿಲ್ಲಿಸಿದರೆ ಸುತ್ತಲಿನ ಜನರಿಗೆ ಕುಡಿಯುವ ನೀರು ಮತ್ತು ದಿನ ಬಳಕೆಯ ನೀರಿನ ಅಭಾವ ತಪ್ಪಿಸಿದಂತಾಗಲಿದೆ.ಆದ್ದರಿಂದ ಕೂಡಲೆ ತಾಲ್ಲುಕು ಆಡಳಿತ ಕೆರೆ ಸ್ವಚ್ಛತೆ ಆರಂಭಿಸಬೇಕು,ಇಲ್ಲವದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಪ್ರವೀಣಕುಮಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here