ಕ್ವಾರಂಟೈನ್‌ಲ್ಲಿ ಕೆಲಸ ಮಾಡಿದವರ ವೇತನ ಬಿಡುಗಡೆಗೆ ರಾಮಲಿಂಗಪ್ಪ ಆಗ್ರಹ

0
42

ಸುರಪುರ: ಕೋವಿಡ್-೧೯ ಕ್ವಾರೆಂಟೇನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವ ಹಾಸ್ಟೇಲ್ ಹೊರಸಂಪನ್ಮೂಲ ಸಿಬ್ಬಂಧಿಗಳಿಗೆ ಬಾಕಿ ಉಳಿದಿರುವ ವೇತನ ನೀಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್ ಒತ್ತಾಯಿಸಿದ್ದಾರೆ.

ಈ ಕುರಿತು ಸುರಪುರ ತಹಸೀಲ್ದಾರರಿಗೆ ಮನವಿ ಮಾಡಿಕೊಂಡಿರುವ ಅವರು, ಮಹಾಮಾರಿ ಕೊರೋನಾ ಕೋವಿಡ್-೧೯ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸುರಪುರ ತಾಲೂಕಿನಾದ್ಯಂತ ಹಾಸ್ಟೇಲ್‌ಗಳಲ್ಲಿ ಅಡಿಗೆಯವರು, ಅಡಿಗೆ ಸಹಾಯಕರು ಮತ್ತು ರಾತ್ರಿ ಕಾವಲುಗಾರರಾಗಿ ಹೊರಸಂಪನ್ಮೂಲ ಮೂಲಕ ಕಾರ್ಯನಿರ್ವಹಿಸುವ ಹಾಸ್ಟೆಲ್ ಕಾರ್ಮಿಕರನ್ನು ಕ್ವಾರೆಂಟೇನ್ ಕೇಂದ್ರಗಳಲ್ಲಿ ಇರಿಸಲಾಗಿರುವ ವ್ಯಕ್ತಿಗಳಿಗೆ ಪ್ರತಿ ದಿನ ನೀಡುವ ಆಹಾರ ಪದಾರ್ಥಗಳ ತಯಾರಿಸುವ ಕೆಲಸಕ್ಕೆ ನಿಯೋಜಿಸಿಕೊಳ್ಳಲು ಜಿಲ್ಲಾಡಳಿತದ ಆದೇಶಿಸಿತ್ತು.

Contact Your\'s Advertisement; 9902492681

ಕೆಲಸಕ್ಕೆ ನಿಯೋಜನೆಗೊಳ್ಳುವ ಕಾರ್ಮಿಕರಿಗೆ ಕನಿಷ್ಠ ವೇತನ ಆಧಾರದಡಿ ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳಿಂದ ದರ ನಿಗಧಿ ಮಾಡಿ, ವಿಪತ್ತು ನಿರ್ವಹಣಾ ಕಾಯ್ದೆ೨೦೦೫ ರ ಅಡಿಯಲ್ಲಿ ಕಾರ್ಮಿಕರು ಕೆಸಲ ಮಾಡಿರುವ ದಿನಕ್ಕೆ ಆಧರಿಸಿ ದಿನದ ವೇತನ ದರ ಅಡಿಗೆಯವರಿಗೆ ರೂ.೫೪೨, ಅಡಿಗೆ ಸಹಾಯಕರಿಗೆ ರೂ.೫೨೨ ಹಾಗು ರಾತ್ರಿ ಕಾವಲುಗಾರರಿಗೆ ರೂ.೫೦೪ ರಂತೆ ವೇತನ ನೀಡುವ ಜವಬ್ದಾರಿಯನ್ನು ಜಿಲ್ಲಾಡಳಿತದಿಂದ ತಹಸಿಲ್ದಾರರಿಗೆ ವಹಿಸಲಾಗಿದೆ.

ಆದರೆ ಸುರಪುರ ತಾಜೂಕಿನಲ್ಲಿ ಮೊದಲ ಹಂತದಲ್ಲಿ ಕಾರ್ಮಿಕ ಕೆಸಲದ ಒಂದು ದಿನಕ್ಕೆ ರೂ.೩೦೦ ರಂತೆ ಒಟ್ಟು ೨೦ದಿನಕ್ಕೆ ವೇತನ ಪಾವತಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಒಂದು ದಿನಕ್ಕೆ ರೂ. ೫೪೪ ಹಾಗೂ ೫೨೨ ರಂತೆ ೭ ಮತ್ತು ೮ನೇ ದಿನಕ್ಕೆ ಮಾತ್ರ ವೇತನ ಪಾವತಿಸಲಾಗಿದೆ. ಕೊವಿಡ್ ಬಿಕ್ಕಟ್ಟಿನ ಸಮಯದಲ್ಲಿ ಎದೆ ಗುಂದದೆ ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡಿ ಕ್ವಾರೆಂಟೇನ್ ಕೇಂದ್ರಗಳಲ್ಲಿ ಹಗಲಿರುಳು ಸೇವೆ ಸಲ್ಲಿಸಿರುವ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ತಾರತಮ್ಯ ಮಾಡಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಈ ಕುರಿತು ಮತ್ತೊಮ್ಮೆ ಮರು ಪರಿಶೀಲಿಸಿ ಜಿಲ್ಲಾಡಳಿತದ ಆದೇಶದಂತೆ ವೇತನ ನೀಡಬೇಕು ಮತ್ತು ಇಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಶೀಘ್ರವೇ ಬಿಡುಗಡೆ ಮಾಡಲು ತುರ್ತು ಕ್ರಮವಹಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here