ಕಲಬುರಗಿ: ನಗರದ ಜೇವರ್ಗಿ ರಸ್ತೆಯ ಕರುಣೇಶ್ವರ ನಗರದ ಮುಂಭಾಗಸಲ್ಲಿರುವ ಎಕ್ಸೆಸ್ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಎಟಿಎಂ ಕಳ್ಳತನಕ್ಕೆ ಯತ್ನಿಸಿದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಡಾವಣೆಯಲಿರುವ ಎಕ್ಸೆಸ್ ಬ್ಯಾಂಕ್ ಎಟಿಎಂ ಶಾಖೆಯ ಗಾಜಿನ ದ್ವಾರವನ್ನು ಮುರಿತು ಒಳ ನುಗ್ಗಿದ ಕಳ್ಳರು, ಎಟಿಎಂ ಮಷಿನ್ನ ಎದುರಿನ ಬಾಕ್ಸ್ ಕಿತ್ತು ಹಣತೆಗೆಯಲು ಯತ್ನಿಸಿದ್ದಾರೆ. ಆದರೆ ಅವರಿಗೆ ಅವರಿಗೆ ಅಲಿಂದ ಅವರಿಗೆ ಹಣ ದೊರೆಯಲಿಲ್ಲ. ಹಣ ಸಿಗದ ಕಾರಣ ಖದೀಮರು ಅಲಿಂದ ಕಾಲು ಕಿತ್ತಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ವಾಹೀದ್ ಕೋತ್ವಾಲ್, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ನಡೆಸಿದ್ದು, ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.