ಸುರಪುರ: ತಾಲೂಕಿನ ಮಲ್ಲಾ (ಕೆ) ಗ್ರಾಮದಲ್ಲಿನ ಹನುಮಂತ ದೇವಸ್ಥಾನದ ಹಿಂಬಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ನಿಂತು ರಸ್ತೆ ಸಂಪೂರ್ಣ ಹದಗೆಟ್ಟಿದೆ.ಇದರಿಂದ ದೇವಸ್ಥಾನದ ಹಿಂಬದಿಯಲ್ಲಿ ತುಂಬಾ ನೀರು ನಿಂತಿರುವುದರಿಂದ ಗಬ್ಬು ನಾತ ಬೀರುತ್ತಿದೆ.
ಇದರಿಂದ ಜನರಲ್ಲಿ ರೋಗದ ಭೀತಿ ಮೂಡಿದೆ.ಆದ್ದರಿಂದ ಕೂಡಲೆ ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಶಾಂತಗೌಡ ಬಿರಾದಾರ್ ಪ್ರಧಾನ ಕಾರ್ಯದರ್ಶಿ ಬಸವರಾಜ ಕಾರನೂರ ಸಾಹೇಬಣ್ಣ ಕುಳಗೇರಿ ಭೀಮಣ್ಣ ಚಾಮನಾಳ ಸಿದ್ದು ಚಾಮನೂರ ಸೇರಿದಂತೆ ಇತರರಿದ್ದರು.