ಬೆಂಗಳೂರು: 20 ಅಡಿ ಎತ್ತರದ ಕಬ್ಬಿನ ಗಣಪತಿ, 2 ಸಾವಿರ ಕೆಜಿ ಲಾಡು, ಹೂವು ಮತ್ತು ಹಣ್ಣುಗಳಿಂದ ದೇವಸ್ಥಾನ ಅಲಂಕಾರ ಹೀಗೆ ಪ್ರತಿ ವರ್ಷ ವೈಶಿಷ್ಟವಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದ ಜೆಪಿ ನಗರದ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಈ ಬಾರಿ ಪರಿಸರ ಸ್ನೇಹೀ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಗಣೇಶ ಚತುರ್ಥಿಯನ್ನ ವಿಜ್ರಂಭಣೆ ಹಾಗೂ ಸಡಗರದಿಂದ ಮಾಡುವುದರಿಂದ ಶ್ರೇಯಸ್ಸು ಲಭಿಸುತ್ತದೆ ಎನ್ನುವುದು ನಮ್ಮೆಲ್ಲರ ನಂಬಿಕೆಯಾಗಿದೆ. ಈ ನಿಟ್ಟಿನಲ್ಲಿ ಕರೋನಾ ಸಂಕಷ್ಟದ ಮಧ್ಯವೂ ಕೂಡಾ ನಾವು ಗಣೇಶ ಚತುರ್ಥಿಯನ್ನು ಆಚರಿಸಲು ನಿರ್ಧಾರ ತಗೆದುಕೊಂಡೆವು. ದೇವಸ್ಥಾನವನ್ನು ಹಣ್ಣುಗಳಿಂದ ಆಲಂಕಾರ ಮಾಡಿ ಪರಿಸರ ಸ್ನೇಹೀ ಗಣಪನ್ನು ಪ್ರತಿಷ್ಠಾಪಿಸಲಾಯಿತು. ಒಂದು ವಾರಗಳ ಕಾಲ ಈ ಆಲಂಕಾರ ಇರಲಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದರು.
ಕರೋನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕ ಅಂತರವನ್ನು ಕಾಪಾಡುವ ಮೂಲಕ ಹಾಗೂ ಎಲ್ಲಾ ಸುರಕ್ಷೆಯ ಅಂಶಗಳನ್ನು ಪಾಲಿಸಿಕೊಂಡು ವಿಶಿಷ್ಟ ಹಾಗೂ ಪರಿಸರ ಸ್ನೇಹಿ ಯಾಗಿ ಗಣಪತಿ ಹಬ್ಬವನ್ನು ಆಚರಿಸಿದ್ದು ಎಲ್ಲರ ಗಮನ ಸೆಳೆಯಿತು.