ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ: 3 ವರೆ ಲಕ್ಷದ ಬೈಕ್ ಗಳು ವಶ

0
50

ಕಲಬುರಗಿ: ಬೆರೆ ರಾಜ್ಯದ ಬೈಕ್ ಗಳನ್ನು ಕಳ್ಳತನ ಮಾಡಿ ಕಲಬುರಗಿಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಅಂತರರಾಜ್ಯ ಕಳ್ಳರನ್ನು ಇಲ್ಲಿನ ನಿಂಬರ್ಗಾ ಪೊಲೀಸರು ಬಂಧಿಸಿ ಆರೋಪಿಗಳಿಂದ ಮೂರುವರೆ ಲಕ್ಷ ಮೌಲ್ಯದ ಬೈಕ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಹೈದ್ರಾಬಾದ್ ಮೂಲದ ಮಹಮ್ಮದ್ ಚೌಧರಿ (25), ಜಿಲಾನಿ (23) ಹಾಗೂ ಬಂದರವಾಡ ಗ್ರಾಮದ ನಿವಾಸಿ ಮಹಮ್ಮದ್ ಸೋಯಲ್ ಚೌಧರಿ (25) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿ ಗ್ಯಾರೇಜ್ ಇಟ್ಟಿರುವ ಇಬ್ಬರು ಆರೋಪಿಗಳು ಬೈಕ್ ಗಳನ್ನು ಕದ್ದು, ನಂಬರ್ ಪ್ಲೇಟ್ ಬದಲಾಯಿಸಿ ಜಿಲ್ಲೆಯ ಸೋಹೆಲ್ ಸಹಾಯದಿಂದ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಬೈಕ್ ಗಳನ್ನು ಮಾರಾಟಕ್ಕೆಂದು ಬಂದಾಗ ನಿಂಬರ್ಗಾ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here