ಹಜಾಮ ಪದ ಬಳಕೆ: ಶಿಕ್ಷೆಗೆ ಒಳಪಡಿಸುವ ಕಾನೂನು ಜಾರಿಗೆ ಒಕ್ಕೂಟ ಆಗ್ರಹ

0
87

ಬೆಂಗಳೂರು: ಹಜಾಮ/ಅಜಾಮ ಪದವನ್ನು ಬಳಸಿ ಬೈಯುವರನ್ನು ಶಿಕ್ಷೆಗೆ ಒಳಪಡಿಸಲು ಅನುವು ಮಾಡಿಕೊಡುವ ಕಾನೂನು ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಕ್ಷೌರಿಕರ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ. ಶಿವಕುಮಾರ್‌ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಅವರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿರುವ ಅವರು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಕ್ಷೌರಿಕ ಮುಟ್ಟದ ಜನರಿಲ್ಲ ಆದರೆ ನಮಗೆ ಸಾಮಾಜಿಕವಾಗಿ ಗೌರವ ದೊರೆಯುತ್ತಿಲ್ಲ. ಎಲ್ಲಾ ವರ್ಗದ ಭಯದ ನೆರಳಿನಲ್ಲಿ ಅಪಹಾಸ್ಯ, ಅವಮಾನ, ಹಿಂಸೆ, ನಿಂದನೆ ಹಾಗೂ ಎಲ್ಲಾ ವರ್ಗಗಳ ಬಾಯಿಯ ಬೈಗುಳದ ತುತ್ತಾಗಿ ಅಪಮಾನಕ್ಕೆ ಒಳಗಾಗಿ ಮಾನಸಿಕ ಹಿಂಸೆ ಅನುಭವಿಸಿಕೊಂಡು ಅಪಹಾಸ್ಯಕ್ಕೆ ತುತ್ತಾಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇಂತಹ ದಾರುಣ ಪರಿಸ್ಥಿತಿ ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಎನ್ನುವ ಸದುದ್ದೇಶದಿಂದ ಹಜಾಮ/ಅಜಾಮ ಪದವನ್ನು ಬಳಸಿ ಅಪಮಾನ ಮಾಡಿದರೆ ಅಂತಹವರನ್ನು ಶಿಕ್ಷೆಗೆ ಒಳಪಡಿಸುವಂತಹ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಕಾನೂನು ಜಾರಿಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯರಾದ ರವಿಕುಮಾರ್‌ ಮತ್ತು ಬೆಂಗಳೂರು ನಗರ ಅಧ್ಯಕ್ಷ ಹೆಚ್‌.ಎನ್‌ ನರಸಿಂಹಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here