ಕಲಬುರಗಿ: ಆಗಸ್ಟ್ 20 ರಂದು ಸಂಜೆ ವೇಳೆಯಲ್ಲಿ ಇಲ್ಲಿನ ಪಬ್ಲಿಕ್ ಗಾರ್ಡ್ ಹತ್ತಿರ ವಿರೇಶ್ ಎಂಬ ವಿದ್ಯಾರ್ಥಿಯನ್ನು ಹಣದ ವ್ಯವಹಾರಕ್ಕಾಗಿ ಕೊಲೆ ಮಾಡಿ ಪರಾರಿಯಾದ ನಾಲ್ವರು ಆರೋಪಿಗಳನ್ನು ಬ್ರಹ್ಮಪೂರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಕೊಟನೂರ ಡಿ ನಿವಾಸಿ ಅಂಬರೀಶ ಕಾರಪುಡಿ ಅ೦ಬು, ಬಸವ ನಗರ ನಿವಾಸಿ ಶ್ರೀಕಾಂತ ಕಾಳ್ಯಾ, ನಂದಕೂರ ನಿವಾಸಿ ಲವಕುಶ ಹಾಗೂ ಕಟ್ಟಿಸಂಗಾವಿ ನಿವಾಸಿ ಗಿರಿರಾಜ ಎಂಬ ನಾಲ್ವರು ಕೊಲೆ ಆರೋಪಿಗಳನ್ನು ಎ.ಸಿ.ಪಿ. ವಿಜಯಕುಮಾರ ಹೆಚ್. ಮಾರ್ಗದರ್ಶನದಲ್ಲಿ ಠಾಣೆಯ ಪಿ.ಐ ಅರುಣ ಎಸ್. ಮುರಗುಂಡಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಶಿವಪ್ರಕಾಶ, ಸುರೇಶ, ರಾಮು ಪವಾರ, ಭೀಮನಾಯಕ. ಸಂಜೀವಕುಮಾರ ರವರ ಕಾರ್ಯಚರ್ಣೆ ನಡೆಸಿ ಬಂಧಿಸಿದ್ದಾರೆ.
ಲಾಳಗೇರಿ ಕ್ರಾಸ್ ಹತ್ತಿರ ಇದ್ದಾಗ ಆರೋಪಿತರು ಸಂಗಡ ಮಾತಡುವದಿದೆ ಎಂದು ಪಬ್ಲಿಕ್ ಗಾರ್ಡನ ಕಡೆಗೆ ಬನ್ನಿರಿ ಅಂತ ಹೇಳಿದ್ದರಿಂದ ಮೂರು ಜನರು ಕೂಡಿಕೊಂಡು ಪಬ್ಲಿಕ್ ಗಾರ್ಡನ ಕಡೆಗೆ ಹೋದಾಗ ಆರೋಪಿ ಅಂಬರೀಶ ಕಾರಪುಡಿ ಅಂಬ್ಯಾ ಇತನು ಕೊಲೆಯಾದ ವಿರೇಶ ಒಂದು ಲಕ್ಷ ರೂಪಾಯಿ ಕೊಡು ಅಂತ ಕೇಳಿದರೂ ಕೊಡುತ್ತಿಲ್ಲ ಎಂದು ವೈಶ್ಯಮ ಬೆಳೆಸಿಕೊಂಡು ಅದೇ ವೈತ್ಯಮದಿ೦ದ ಆರೋಪಿತರೆಲ್ಲರೂ ಕೂಡಿಕೊಂಡು ಚಾಕು ಹಿಡಿದುಕೊ೦ಡು ಮೊಟರ ಸೈಕಲ ಮೇಲೆ ಪಬ್ಲಿಕ್ ಗಾರ್ಡನ ಕಡೆಗೆ ಬಂದಾಗ ಅವರಿಗೆ ಅಂಜಿ ಮುಖ್ಯ ರಸ್ತೆ ಕಡೆ ಓಡಿ ಹೋಗುತ್ತಿದ್ದಾಗ ವಿರೇಶ್ ಗೆ ಬೆನ್ನಟ್ಟಿ ಜಾಕುವಿನಿಂದ ಹೊಡೆದು ಕೊಲೆ ಪರಾರಿಯಾಗಿದ್ದರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.