ಜೇವರ್ಗಿ: ತಾಲೂಕಿನ ಶ್ರೀರಾಮ ಸೇನಾ ಸಂಘಟನೆ ಕಚೇರಿಯಲ್ಲಿ ಗಣೇಶ್ ಪ್ರತಿಷ್ಠಾಪನೆ ಮಾಡಲಾಯಿತು.
ಗಣೇಶ್ ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಿಲ್ಲದ ಕಾರಣ ಸಂಘಟನೆ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲು ಸರಕಾರಕ್ಕೆ ಮನವಿ ಮಾಡಿದಾಗ ಸರ್ಕಾರ ಮನವಿಗೆ ಒಪ್ಪಿಗೆ ನೀಡಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಿದೆ ಎಂದರು.
ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಹೆಚ್ಚು ಜನ ಸೇರಿದಂತೆ ನಾವು ಗಣಪತಿ ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಆಂದೋಲ ಶ್ರೀಗಳು ಹೇಳಿದರು.
ರಾಜ್ಯದಲ್ಲಿ ನಡೆದ ಕೆ.ಜಿ.ಹಳ್ಳಿ ,ಡಿ.ಜೆ ಹಳ್ಳಿ ಪ್ರಕರಣದ ಕುರಿತು ಸರಕಾರ ಏನು ಮಾಡುತ್ತಿದೆ ?ಎಂದು ಪ್ರಶ್ನಿಸಿದರು. ಇಂಥ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ 350 ಜನರನ್ನು ಬಂಧಿಸಲಾಗಿತ್ತು ಇದರಲ್ಲಿ 40 ಜನರಿಗೆ ಭಯೋತ್ಪಾದಕರ ಜೊತೆ ಸಂಭಂದ ಇದೆ ಎಂದು ಗೊತ್ತಾಗಿದೆ. ಇದರಲ್ಲಿ ಅಬ್ದುಲ್ ರೈಮಾನ್ ಎಂಬಾತನನ್ನು ಬಂಧಿಸಲಾಗಿದೆ. ಸಂಘಟನೆಗಳು ಇದ್ದುಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ನಂತರ ಮಾತು ಮುಂದುವರಿಸಿದ ಶ್ರೀಗಳು ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯನವರು ಮುಸ್ಲಿಂ ಸಂಘಟನೆಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಾಂಬ ನಿಷ್ಕ್ರಿಯದಳ ಆಗಮಿಸಿ ಗಣೇಶಮೂರ್ತಿಯನ್ನು ತನಿಖೆ ನಡೆಸಿದರು. ಜೊತೆಗೆ ಜೇವರ್ಗಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರಿರಾಮ ಸೇನಾ ತಾಲೂಕ ಅಧ್ಯಕ್ಷರಾದ ಈಶ್ವರ ಹಿಪ್ಪರಗಿ, ಮಲ್ಲನಗೌಡ ಪಾಟೀಲ್, ಸಿದ್ದಲಿಂಗ ನಾಯ್ಕೋಡಿ ಯಡ್ರಾಮಿ ತಾಲೂಕ ಶ್ರೀರಾಮ್ ಸಂಘಟನೆ ಅಧ್ಯಕ್ಷರು, ಸಂಗನಗೌಡ ಪಾಟೀಲ್ ರದ್ದೇವಾಡಗಿ, ಗುರುಲಿಂಗಪ್ಪ ಗೌಡ ಮಾಲಿ ಪಾಟೀಲ್, ಸಂತೋಷ್ ಮಲ್ಲಾಬಾದ್, ರಾಜು ತಳವಾರ, ಧರಮು ಚಿನ್ನು ರಾಥೋಡ್, ಮಲ್ಲೇಶೇಟೆಪ್ಪಗೌಡ ಹಿರೇಗೌಡ , ಆನಂದ್ ದೇಸಾಯಿ, ತಾಲೂಕ ಶ್ರೀರಾಮಸೇನೆ ಸಂಘಟನೆ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.