ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದ ಹೊಲವೊಂದರಲ್ಲಿ ವಿದ್ಯುತ್ ತಂತಿ ತಗುಲಿ 2 ಎತ್ತುಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ನಿಂಬರ್ಗಾ ಗ್ರಾಮದ ರೈತ ಸುಭಾಷ್ ಮಾನೆ ಎಂಬವರಿಗೆ ಸೇರಿದ 2 ಎತ್ತುಗಳು ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿವೆ. ನಿಂಬರ್ಗಾ ಪೊಲೀಸ್ರು ಸ್ಥಳಕ್ಕೆ ಆಗಮಿಸಿ ಜೇಸ್ಕಾo ಅಧಿಕಾರಿಗಳನ್ನು ಕರೆಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಬಡ ರೈತ ಕುಟುಂಬದವರಾದ ಸುಭಾಷ್ ಮಾನೆಯವರಿಗೆ 2 ಎತ್ತುಗಳು ಸಾವನ್ನಪ್ಪಿರೋದರಿಂದ ಕೃಷಿ ಚಟುವಟಿಕೆಗೆ ಆಧಾರವೇ ಇಲ್ಲದಂತಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ನೊಂದ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ನಿಂಬರ್ಗಾ ವಲಯ ಕ.ರ.ವೇ ಅಧ್ಯಕ್ಷ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.