ಕೋಲಾರ: ಜಿಲ್ಲೆ ಮತ್ತು ತಾಲೂಕಿನ ನರಸಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಖಾಜಿ ಕಲ್ಲಹಳ್ಳಿ ಗ್ರಾಮದಿಂದ ವಕ್ಕಲೇರಿ ಮುಖ್ಯ ರಸ್ತೆಯ ಮೇಲೆ ಚರಂಡಿ ವ್ಯವಸ್ಥೆ ಇಲ್ಲದೆ ಶೌಚಾಲಯದ ನೀರನ್ನು ರಸ್ತೆಯ ಮೇಲೆ ಬಿಟ್ಟಿದ್ದು ಗ್ರಾಮದ ಮುಖ್ಯ ರಸ್ತೆ ಸುಮಾರು ಎರಡು ಅಡಿಗಳಷ್ಟು ಹಳ್ಳಗಳು ಬಿದ್ದಿದೆ ಎಂದು ಗ್ರಾಮಸ್ಥರ ಮತ್ತು ಸಾರ್ವಜನಿಕರ ಆಕ್ರೋಶ.
ಅಲ್ಲದೆ ರಸ್ತೆಯ ಬದಿಗಳಲ್ಲಿ ಮನೆಗಳಿದ್ದು ಶೌಚಾಲಯದ ಕೆಟ್ಟ ನೀರು ರಸ್ತೆಯಲ್ಲಿ ಹರಿದು ಹಳ್ಳಗಳಲ್ಲಿ ನಿಂತಿರುವುದರಿಂದ ದುರ್ವಾಸನೆ ಬರುತ್ತಿದೆ. ಇದರಿಂದ ಮನೆಗಳಲ್ಲಿ ಇರುವುದು ಕಷ್ಟವಾಗುತ್ತದೆ. ಈಗಿನ ಪರಿಸ್ಥಿತಿಯಿಂದ ಓಡಾಡಲು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ರಸ್ತೆಯಲ್ಲಿ ಇರುವ ಹಳ್ಳಗಳಲ್ಲಿ ಅನೇಕ ವಾಹನ ಸವಾರರು ಬಿದ್ದು ಸಣ್ಣ ಪುಟ್ಟ ಗಾಯಗಳು ಸಹ ಆಗಿದೆ. ಊರಿನ ಸ್ಥಳೀಯರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಈ ಸಮಸ್ಯೆ ಕೇವಲ ನಿನ್ನೆ ಮೊನ್ನೆಯದಲ್ಲ ಸುಮಾರು 6 ತಿಂಗಳಿಂದ ಇದೇ ಸಮಸ್ಯೆಯನ್ನು ಊರಿನ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ನರಸಾಪುರ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದು ನಮ್ಮ ಖಾಜಿ ಕಲ್ಲಹಳ್ಳಿ ಗ್ರಾಮದ ರಸ್ತೆ ಕಾಮಗಾರಿಯ ಪಟ್ಟಿ ಮತ್ತು ಹಣ ಗ್ರಾಮ ಪಂಚಾಯ್ತಿಗೆ ಬಂದಿದ್ದರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಎಂದು ದೂರಿದರು.
ಈ ಬಗ್ಗೆ ಮುಖ್ಯವಾಗಿ ನರಸಾಪುರ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳಾಗಿದ್ದ ಮಂಜುನಾಥ್ ರವರಿಗೆ ಮನವಿ ಪತ್ರ ನೀಡಲಾಗಿತ್ತು. ಆದರೆ ಈಗ ಅವರು ಪದೋನ್ನತಿ ಹೊಂದಿ ಬೇರೆ ಕಡೆ ವರ್ಗಾವಣೆ ಆಗಿರುವ ಕಾರಣ ದಿಂದ ನಮಗೆ ತೊಂದರೆ ಆಗುತ್ತಿದೆ. ಆಡಳಿತ ಅಧಿಕಾರಿಗಳು ನಮ್ಮ ಗ್ರಾಮಗಳಿಗೆ ಬಂದು ನಮ್ಮ ಊರಿನಲ್ಲಿ ಆಗುತ್ತಿರುವ ಅನಾಹುತಗಳನ್ನು ಬಗೆಹರಿಸಬೇಕು. ಎಂದು ತಿಳಿಸಿದರು.
ಆದ್ದರಿಂದ ದಯವಿಟ್ಟು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಚರಂಡಿ ಮತ್ತು ಗ್ರಾಮದ ರಸ್ತೆ ಕಾಮಗಾರಿಯ ವ್ಯವಸ್ಥೆ ಸರಿನಡೆಸಬೇಕೆಂದು ಆಗ್ರಹಿಸಿದರು.
” ಈ ಹಿಂದೆ ಸದರಿ ನರಸಾಪುರ ಗ್ರಾಮ ಪಂಚಾಯ್ತಿಯಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದ ಮಂಜುನಾಥ್ ಪದೋನ್ನತಿ ಹೊಂದಿದ್ದು. ಇದೀಗ ಪಂಚಾಯ್ತಿಯಲ್ಲಿ ಸಾರ್ವಜನಿಕರ ಅಳಲು ಕೇಳುವವರಿಲ್ಲದಂತಾಗಿದೆ “.