ಕಲಬುರಗಿ: ಹರವಾಳ ಕ್ರಾಸ್ ಹೆದ್ದಾರಿಯಲ್ಲಿ ಭಾನುವಾರ 87 ವರ್ಷ ವಯಸ್ಸಾದ ಅನಾಥ ಮಹಿಳೆಯ ಅಂತ್ಯಕ್ರಿಯೆಯನ್ನು ಹಿಂದು ಸಂಪ್ರದಾಯದಂತೆ ನೆರವೇರಿಸಿದ ಮೂಲಕ ಪಿಎಸ್ಐ ಮಲ್ಲಣ್ಣ ಯಲಗೋಡ ಮಾನವೀಯತೆ ಮೆರೆದಿದ್ದಾರೆ.
ಅನಾಥ ಮಹಿಳೆಯ ಶವವನ್ನು ಹೆದ್ದಾರಿಯಲ್ಲಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜೇವರ್ಗಿ ನೆಲೋಗಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಮಾಹಿತಿಯನ್ನು ಕಲೆಹಾಕಲು ಮುಂದಾಗಿದ್ದಾರೆ ಆದರೆ ಅವರಿಗೆ ಯಾರು ಇಲ್ಲ ಬಿಕ್ಷುಕಿ ಎಂಬ ಮಾಹಿತಿ ಬರುತ್ತಿದ್ದಂತೆ ಪಿಎಸ್ಐ ಮಲ್ಲಣ್ಣ ಹರವಾಳ ಗ್ರಾಮ ಪಂಚಾಯಿತಿಯ ಸಹಕಾರ ಪಡೆದು ಸಕಲ ವಿಧಿ ವಿಧಿ ವಿಧಾನಗಳನ್ನು ನೆರವೇರಿಸಿದರು.
ಗ್ರಾಮ ಪಂಚಾಯಿತಿಯಿಂದ ಮಹಿಳೆಗೆ ಹೊಸ ಸೀರೆ ಅಂತ್ಯಸಂಸ್ಕಾರಕ್ಕೆ ಸೇರಿದಂತೆ ಬೇಕಾಗುವ ವಸ್ತುಗಳನ್ನು ಪೂರೈಸಿತ್ತು. ಅನಾಥ ಮಹಿಳೆಗೆ ವಿಧಿವತ್ತಾಗಿ ಅಂತ್ಯಕ್ರಿಯೆ ನಡೆಸುವ ಮೂಲಕ ಕರ್ತವ್ಯದ ಜೊತೆಗೆ ಮಾನವೀಯತೆಗೆ ಬೆಲೆ ನೀಡಿದ ಪೊಲೀಸ್ ಅಧಿಕಾರಿ ಪಿಎಸ್ ಐ ಮಲ್ಲನಗೌಡ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಹರವಾಳ ಗ್ರಾಮ ಪಂಚಾಯತಿ ಕರವಸೂಲಿಗಾರ ಸಿದ್ದು ಕಾಳಪ್ಪಗೋಳ, ಸಿದ್ದರಾಮ ಆದೋನಿ, ಬಸವರಾಜ್ ಸಿದ್ದಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.