ಶಹಾಪುರ : ಜೋಕುಮಾರ ಆಚರಣೆ ಗ್ರಾಮೀಣ ಭಾಗದ ಜಾನಪದ ಸಂಸ್ಕೃತಿ ಹಿನ್ನೆಲೆ ಹೊಂದಿದ್ದು ನಾಡಿನೆಲ್ಲೆಡೆ ನಿನ್ನೆಯಿಂದಲೇ ವಿಜೃಂಭಣೆಯಿಂದ ನಡೆಯುತ್ತಿದೆ,ಒಂದು ವಾರಗಳ ಕಾಲ ಜೋಕುಮಾರನನ್ನು ಹೊತ್ತ ಮಹಿಳೆಯರು ಹಳ್ಳಿಗಳಲ್ಲಿ ಎಲ್ಲ ಮನೆ ಮನೆಗಳಿಗೆ ತೆರಳಿ ಜೋಕಪ್ಪನ ಕುರಿತಾದ ಜಾನಪದ ಸಾಂಸ್ಕೃತಿಕ ಹಾಡುಗಳನ್ನು ಹಾಡಿ ಮನೆ ಮುಂದೆ ಬರುತ್ತಿದ್ದಂತೆ ಜೋಕುಮಾರನಿಗೆ ಕಾಯಿ,ಕರ್ಪೂರ,ಊದುಬತ್ತಿ ಬೆಳಗಿ ದವಸ ಧಾನ್ಯಗಳನ್ನು ಅರ್ಪಿಸುತ್ತಾರೆ.
ಪ್ರತಿ ವರ್ಷ ಜೋಕುಮಾರ ಗಣಪತಿ ಹೋಗುವ ದಿನವೆ ಬರುತ್ತಾನೆ ಅಲ್ಲದೆ ಮಳೆ ತರುತ್ತಾನೆ ಎಂಬ ನಂಬಿಕೆ ನಮ್ಮ ಜನರಲ್ಲಿದೆ.ಗ್ರಾಮದ ನಾಗಮ್ಮ ಹಾಗೂ ಸಂಗಡಿಗರು ಸೇರಿಕೊಂಡು ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳು ತುಂಬಿ ಹೊಡೆದ ಎಂದು ಜನಪದ ಹಾಡನ್ನು ಹಾಡುತ್ತಾ ಜೋಕುಮಾರನನ್ನು ಹೊತ್ತು ಊರು ತುಂಬಾ ಬರುತ್ತಾರೆ.