ರೋಗಮುಕ್ತರಾಗಲು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ-ಡಾ.ನಾಮದೇವ ಚವ್ಹಾಣ್

0
133

ಶಹಾಬಾದ:ಒತ್ತಡದ ಜಗತ್ತಿನಲ್ಲಿ ಜೀವಿಸುತ್ತಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ರೋಗಿಗಳಾಗುತ್ತಿದ್ದೆವೆ.ಇದರಿಂದ ಹೊರಬರಬೇಕಾದರೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಮಾನಸಿಕ ತಜ್ಞ ಡಾ.ನಾಮದೇವ ಚವ್ಹಾಣ್ ಅವರು ಹೇಳಿದರು.

ಅವರು ಗುರುವಾರ ನಗರದ ಜೈ ಸೇವಾಲಾಲ ಬಂಜಾರ ಯುವಕ ಸಂಘದ ವತಿಯಿಂದ ಹನುಮಾನ ನಗರ ತಾಂಡಾದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

Contact Your\'s Advertisement; 9902492681

ಹೆಚ್ಚಿನ ಕೆಲಸ. ಬೇರೆಯವರಂತೆ ನಾವು ಆಗಬೇಕೆಂಬ ತರಾತುರಿ, ಒತ್ತಡದ ಮನಸ್ಥಿತಿಯಿಂದ ಸಮಸ್ಯೆ ಉಲ್ಬಣಗೊಳ್ಳುತ್ತವೆ.ಇದರಿಂದ ಮಾನಸಿಕ ಖಿನ್ನತೆ,ಆತಂಕ ಬಹುತೇಖರಲ್ಲಿ ಹೆಚ್ಚಾಗುತ್ತದೆ.ಅಲ್ಲದೇ ವ್ಯಾಯಾಮ ಇಲ್ಲದಿರುವಿಕೆ, ಶ್ರಮಕ್ಕಿಂತ ಹೆಚ್ಚು ಆಹಾರ ಸೇವನೆ, ಸರಿಯಾಗಿ ನಿದ್ದೆ ಮತ್ತು ಊಟ ಮಾಡದಿರುವುದು ಆರೋಗ್ಯಕ್ಕೆ ಮಾರಕವಾಗಿದೆ.

ಒತ್ತಡ ರಹಿತ ಜೀವನ ನಡೆಸಿದರೇ ಮಾತ್ರ ರೋಗಗಳಿಂದ ದೂರವಿರಬಹುದು.ಅದಕ್ಕಾಗಿ ಮೊದಲು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.ಇಂದು ಗ್ರಾಮೀಣ ಭಾಗದಲ್ಲಿ ಮಾಟ, ಮಂತ್ರಕ್ಕೆ ಮಾನಸಿಕವಾಗಿ ಖಿನ್ನತೆಯಿಂದ ಇರುವುದು ಕಂಡು ಬರುತ್ತಿದ್ದೆ, ದೇವರ ಬಗ್ಗೆ ನಂಬಿಕೆ ಇರಲಿ ಆದರೆ ಮೂಡನಂಬಿಕೆ ಬೇಡ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಶ್ರೀರಮಣಾದೇವಿ ದೇವಸ್ಥಾನದ ಅಧ್ಯಕ್ಷ ಕಿಶನ ನಾಯಕ, ಬಂಜಾರ ಸರಕಾರಿ ಅರೆ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಬಿ.ನಾಯಕ ಮಾತನಾಡಿದರು. ಡಾ.ಅಜಯ ರಾಠೋಡ, ಬಂಜಾರ ಸಮಾಜದ ಮುಖಂಡ ಸುರೇಶ ನಾಯಕ, ನಗರಸಭೆ ಸದಸ್ಯ ಅಮ್ಜದ , ರಜನಿಕಾಂತ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ್, ಖೇಮು ನಾಯಕ, ವೇದಿಕೆಯಲ್ಲಿದ್ದರು. ವಿಜಯ ಚವ್ಹಾಣ ಪ್ರಾಸ್ತಾವಿಕ ಮಾತನಾಡಿದರು, ಸಂಘದ ಅಧ್ಯಕ್ಷ ಕಿರಣ ಚವ್ಹಾಣ್ ನಿರೂಪಿಸಿದರು. ಆನಂದ ಚವ್ಹಾಣ್, ಚಂದರ ಠಾಕೂರ, ವಿಕ್ಕಿ ನಾಯಕ, ವಿಕ್ರಮ ರಾಠೋಡ, ರಾಹುಲ ನಾಯಕ, ಹಾಗೂ ಯುವಕರು, ಸ್ಥಳೀಯರು ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here