ಚಿತ್ರದುರ್ಗ: ಜಿಲ್ಲೆ ಹಿರಿಯೂರು ಅದೊಂದು ಪುಟ್ಟ ಶಾಲೆ, ಆ ಶಾಲೆಯಲ್ಲಿ ಕನ್ನಡ ಕಲರವ, ಮಕ್ಕಳ ಕಲಿಕೆಗೆ ಬೇಕಾಗುವಷ್ಟು ಶಾಲಾ ಅಭಿವೃದ್ಧಿ, ಉತ್ತಮ ಶಿಕ್ಷಣ, ಮತ್ತೆ ಮಕ್ಕಳಿಗೆ ಶಿಕ್ಷಣ ಕೊಡುವ ಸಲುವಾಗಿ ಇತ್ತ ಬೇಸಿಗೆ ರಜೆ ಮುಗಿದಿದ್ದು ಮಕ್ಕಳನ್ನು ಶಾಲೆಗೆ ಕರೆತರಲುವ ಸಲುವಾಗಿ ವೀಶೇಷ ಕಾರ್ಯಕ್ರಮ ಹಮ್ಮಿಕೊಂಡಿತು.
ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಸರ್ಕಾರದಿಂದ ನೀಡುವ ಉಚಿತ ಶಿಕ್ಷಣ, ಪಠ್ಯ ಪುಸ್ತಕ, ಇನ್ನಿತರ ಯೋಜನೆಗಳನ್ನ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು, ಹಾಗೆಯೇ ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕು, ಮಕ್ಕಳು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಕರೆ ನೀಡಿದರು..
ಈ ಕಾರ್ಯಕ್ರಮದಲ್ಲಿ ADPI ನಾಗರಾಜ್ ಚಾರಿ, ತಿಪ್ಪೇಸ್ವಾಮಿ, ಕೆಂಗಪ್ಪ, ಶಾಲಾ ಶಿಕ್ಷಕ ಪರಮೇಶ್ವರಪ್ಪ ಸೇರಿದಂತೆ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.