ಮಂಗಳೂರಿಗೆ ನಿತ್ಯ ರಾತ್ರಿ ವಿದ್ಯೂತ್ ಸಂಪರ್ಕ ಕಡಿತ ವಿರೋಧಿಸಿ ಮನವಿ

0
81

ಸುರಪುರ: ತಾಲ್ಲೂಕಿನ ಮಂಗಳೂರು ಗ್ರಾಮಕ್ಕೆ ಕಳೆದ ಒಮದು ವಾರದಿಂದ ನಿತ್ಯ ರಾತ್ರಿ ವಿದ್ಯೂತ್ ಸಂಪರ್ಕ ಕಡಿತಗೊಳಿಸುತ್ತಿದ್ದು ಇದರಿಂದ ಗ್ರಾಮದಲ್ಲಿ ಕಳ್ಳತನದ ಪ್ರಕರಣಗಳು ಜರುಗುತ್ತಿವೆ ಎಂದು ಆರೋಪಿಸಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಆದಿವಾಸಿಗಳ ಜೀವನ ಮಟ್ಟ ಸುಧಾರಣಾ ಸಮಿತಿ ಸದಸ್ಯ ಭೀಮರಾಯ ಒಂಟೆತ್ತು ಮಾತನಾಡಿ,ಮಂಗಳೂರು ಗ್ರಾಮದಲ್ಲಿ ಕಳೆದ ಒಮದು ವಾರದಿಂದ ನಿತ್ಯ ರಾತ್ರಿ ಗ್ರಾಮದಲ್ಲಿ ವಿದ್ಯೂತ್ ಕಡಿತಗೊಳಿಸಲಾಗುತ್ತಿದೆ.ಇದರಿಂದ ಅನೇಕ ಕಳ್ಳತನ ಪ್ರಕರಣಗಳು ನಡೆದಿವೆ,ಇನ್ನೂ ಹೆಚ್ಚಾಗುವ ಭೀತಿಯಿಂದಾಗಿ ಜನತೆ ರಾತ್ರಿ ನಿದ್ದೆ ಬಿಟ್ಟು ಕಳಿತುಕೊಳ್ಳುವಂತಾಗಿದೆ.ನಿರಂತರ ಜ್ಯೋತಿ ಎಂದು ಹೇಳಲಾಗುತ್ತಿದೆ ಆದರೆ ಮಂಗಳೂರು ಗ್ರಾಮಕ್ಕೆ ಕತ್ತಲೆ ಭಾಗ್ಯ ನೀಡಿದಂತಾಗುತ್ತಿದೆ.ಆದ್ದರಿಂದ ಕೂಡಲೆ ವಿದ್ಯೂತ್ ಕಡಿತಗೊಳಿಸುವುದನ್ನು ನಿಲ್ಲಿಸಿ ನಿರಂತರ ವಿದ್ಯೂತ್ ನೀಡಬೇಕೆಂದರು.

Contact Your\'s Advertisement; 9902492681

ಗ್ರಾಮದ ಅನೇಕ ಓಣಿಗಳಲ್ಲಿ ವಿದ್ಯೂತ್ ಕಂಬ ಅಳವಡಿಸಲು ದೀನ ದಯಾಳ ಉಪಾಧ್ಯಾಯ ಯೋಜನೆಯಡಿ ಕಂಬಗಳು ಮಂಜೂರಾದರು ವಿದ್ಯೂತ್ ಕಂಬಗಳು ಹಾಕಿಲ್ಲ ಕೂಡಲೆ ವಿದ್ಯೂತ್ ಕಂಬ ಹಾಕಿ ವಿದ್ಯೂತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.

ನಂತರ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ಜೆಸ್ಕಾಂ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ತಿರುಪತಿ ನಾಯಕ ತನಿಕೇದಾರ,ಭೀಮನಗೌಡ ಪಾಟೀಲ, ಹುಸೇನಭಾಷಾ ಹಾದಿಮನಿ,ಶರಣಬಸವ ಬಡಿಗೇರ,ನಂದಪ್ಪ ದೊರೆ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here