ಶೈಕ್ಷಣಿಕ ಬೀಜ ಬಿತ್ತಿದವರು ಪೂಜ್ಯ ದೊಡ್ಡಪ್ಪ ಅಪ್ಪಾರವರು : ಬಸವರಾಜ ದೇಶಮುಖ

0
27

ಕಲಬುರಗಿ: ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ಶೈಕ್ಷಣಿಕ ಬೀಜ ಬಿತ್ತಿದರ ಪರಿಣಾಮ ಇಂದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಆ ನೆರಳಲ್ಲಿ ಇಂದು ನಾವೆಲ್ಲರು ಜೀವಿಸುತ್ತಾ ಇದ್ದೇವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿಪ್ರಾಯ ಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಗಂಣದಲ್ಲಿ ಗುರುವಾರ ಆಯೋಜಿಸಿದ್ದ ಪರಮ ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪಾ ಅವರ 37ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟಿಸಿ ಮತ್ತು ಪಿಎಚ್.ಡಿ ಪದವಿ ಪಡೆದ ಹಾಗೂ ಇತರರನ್ನು ಸನ್ಮಾನಿಸಿ ಮಾತನಾಡಿದ ದೇಶಮುಖ ಅವರು, ದೊಡ್ಡಪ್ಪ ಅಪ್ಪಾ ಅವರು ಸಾರ್ವಜನಿಕ ಗ್ರಂಥಾಲಯ ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮೂಡಿಸಿರುವುದಲ್ಲದೇ, ಸ್ವಂತಂತ್ರ ಹೋರಾಟದ ಹಾದಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದರು ಎಂದರು.

Contact Your\'s Advertisement; 9902492681

ಈ ಸಂಸ್ಥಾನದ ಪ್ರತಿ ಕಣದಲ್ಲೂ ದೊಡ್ಡಪ್ಪ ಅಪ್ಪಾರವರ ಆರ್ಶಿವಾದ ಎಂದು ಹೇಳಿದ ಅವರು, ದೊಡ್ಡಪ್ಪ ಅಪ್ಪಾ ಅವರ ಜೊತೆ ಚಿಕ್ಕವರಿದ್ದಾಗ ಕಳೆದ ಕ್ಷಣಗಳನ್ನು ಮೆಲಕು ಹಾಕುವುದರ, ಜೊತೆಗೆ ದೇಶಮುಖ ಕುಟುಂಬ ಸದಾ ಅವರ ಚಿರಋಣಿಯಾಗಿರುತ್ತದೆ ಎಂದರು.

ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಮಾತನಾಡಿ, ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಈ ಸಂಸ್ಥಾನ ಬೆಳೆಸಿದವರು ಪೂಜ್ಯ ದೊಡ್ಡಪ್ಪ್ಪ ಅಪ್ಪಾ ಅವರು, ಶಿಕ್ಷಣ ಕ್ಷೇತ್ರಕ್ಕೆ ಅವರು ದೊಡ್ಡ ಭದ್ರ ಬುನಾದಿ ಹಾಕಿದಾರೆ. ಅವರು ಹಾಕಿದ ಈ ಬುನಾದಿ ನಿರಂತರವಾದುದ್ದಾಗಿದೆ. ಕೋವಿಡ್-19 ಕಾರಣದ ಹಿನ್ನೆಲೆಯಲ್ಲಿಯೂ ಸಂಸ್ಥಾನದ ಯಾವುದೇ ಕಾರ್ಯಕ್ರಮಗಳು ನಿಂತಿಲ್ಲ ಎಂದರು.

ಸಾರ್ವಜನಿಕ ಗ್ರಂಥಾಲಯ ಆಂಭಿಸುವ ಮೂಲಕ ಸಮೂಹ ಶಿಕ್ಷಣಕ್ಕೆ ನಾಂದಿಹಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ತಮ್ಮ ವ್ಯಕ್ತಿತ್ವವನ್ನು ಮೂಡುಪಾಗಿಟ್ಟಿದ್ದರು ಎಂದು ಹೇಳಿದರು.

ಪಿಎಚ್.ಡಿ ಅಧ್ಯಯನ ಮುಗಿಸಿ ಡಾಕ್ಟರೇಟ್ ಪದವಿ ಪಡೆದ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಪ್ರಾಧ್ಯಾಪಕರಾದ ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಆ್ಯಂಡ ಕಮ್ಯುನಿಕೇಷನ್ ವಿಭಾಗ ಪ್ರಾಧ್ಯಾಪಕರಾದ ಹಾಗೂ ವಿವಿ ಡೀನ್ ರಾದ ಡಾ. ಲಕ್ಷ್ಮಿ ಪಾಟೀಲ, ಅಪ್ಪಾ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ. ಸೈದಾ ಆಶ್ರಾ, ಡಾ. ಸಚೀನಕುಮಾರ ವೀರಶೆಟ್ಟಿ, ಡಾ. ವೀರುಪಾಕ್ಷಪ್ಪ ಪಾಟೀಲ, ಅಪ್ಪಾ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ಆ್ಯಂಡ ಕಮ್ಯುನಿಕೇಷನ್ ವಿಭಾಗದ ಡಾ. ಶಶಿಧರ ಸೊನ್ನದ, ಅಪ್ಪಾ ಎಂಬಿಎ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಚಂದ್ರಕಾಂತ ಜೇವರ್ಗಿ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಸುನಿತಾ ಪಾಟೀಲ, ಡಾ. ಗೀತಾ ಹರವಾಳ, ಡಾ. ಸುಮಂಗಲಾ ಪಾಟೀಲ, ಡಾ. ಎನ್.ಎಸ್.ಹೂಗಾರ ಅವರನ್ನು ಹತ್ತು ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಸಂಶೋಧನ ಅಧ್ಯಯನಕ್ಕೆ ಹೆಸರು ನೊಂದಾಯಿಸಿದ ದೊಡ್ಡಪ್ಪ ಅಪ್ಪಾ ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರವಿ ಆವಂತಿ, ಬಿಬಿಎ ವಿಭಾಗ ನಿಕಿತಾ ಪಿ, ಆಂಗ್ಲ ವಿಭಾಗದ ಅಜಯ ಹೊಗಡೆ ಮತ್ತು ಎಚ್. ಆರ್. ಶರತ್ ಕುಮಾರ. ಭಾಗ್ಯಲಕ್ಷ್ಮಿ ಕೋಟಿ, ಅರ್ಚನಾ ಕಿಣಗಿ, ಶಿಲ್ಪಾ ಎಚ್, ಸ್ಪೂರ್ತಿ ಪಾಟೀಲ, ಶಿಲ್ಪಾ ಕೆ ಮುಂತಾದವರನ್ನು ಸನ್ಮಾನಿಸಲಾಯಿತು.
ಶ್ರಾವಣ ಮಾಸದ ಪರ್ಯಂತ ಪ್ರವಚನ ಸೇವೆಗೈದ ಡಾ. ಶಿವರಾಜ ಶಾಸ್ತ್ರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಂಸ್ಥಾನದಲ್ಲಿ ವಿಶೇಷ ಸೇವೆ ಸಲ್ಲಿಸಿದ ಗೀರಿಶ ಪಾಟೀಲ, ಸಾಗರ, ಸಂತೋಷ, ಪ್ರಕಾಶ ಹಾಗೂ ನೃತ್ಯ ಕ್ಷೇತ್ರದಲ್ಲಿ ಪ್ರವೀಣಳಾದ ಕು. ರಾಯಿಕಲ್ ರಾಣಿ ಅವರನ್ನು ಸನ್ಮಾನಿಸಲಾಯಿತು. ಡಾ. ಗೀತಾ ಹರವಾಳ ಮತ್ತು ಪ್ರಾಧ್ಯಾಪಕ ಶರದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ನಿರೂಪಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಪ್ರಾರ್ಥನೆ ಗೀಗೆ ಹಾಡಿದರು. ಡಾ. ಶಿವರಾಜ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ದಯಾನಂದ ಹೊಡಲ ವಂದಿಸಿದರು. ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ವಿವಿ ಡೀನ್ ಡಾ. ಲಕ್ಷ್ಮಿ ಪಾಟೀಲ, ಡಾ. ಎಸ್.ಜಿ. ಡೊಳ್ಳೆಗೌಡರ್, ಡಾ. ನೀಲಾಂಬಿಕಾ ಪಾಟೀಲ ಇತರ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here