ಅನಾಮದೇಯ ಚೀಲಗಳು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ

0
46

ಶಹಾಬಾದ: ತಾಲೂಕಿನ ಸಾರ್ವಜನಿಕರ ಮನೆಗೆ ಅನಾಮದೇಯ ಬೀಜದ ಚೀಲಗಳು ಅಥವಾ ಏನಾದರೂ ಪಾರ್ಸಲಗಳು ಬಂದರೆ ಅದನ್ನು ಒಡೆದು ಹಾಕದೇ, ಸಮೀಪದ ಕೃಷಿ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ವಿಷಯ ತಿಳಿಸಿ, ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಹಕಾರ ನೀಡಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ರೈತರ ವಿಳಾಸಕ್ಕೆ ಅನಾಮದೇಯ ಬೀಜದ ಚೀಲಗಳು ಕೆಲವಡೆ ಬಂದಿರುವುದು ಕೇಳಿ ಬಂದಿದೆ.ಈಗಾಗಲೇ ಟಿವಿ ನ್ಯೂಸ್ ಚಾನಲಗಳಲ್ಲಿ ಈ ಬಗ್ಗೆ ತಿಳಿಸುತ್ತಾ, ಚೀನಾ ದೇಶದಿಂದ ಈ ರೀತಿಯ ಪಾರ್ಸಲ್ ಚೀಲಗಳು ಬರುತ್ತಿವೆ ಎಂದು ಹೇಳಿದೆ.ಅಂತಹ ಚೀಲಗಳಲ್ಲಿ ಬಿತ್ತನೆ ಬೀಜ ಹೊರತುಪಡಿಸಿ ರೋಗ ಹರಡುವ ರೋಗಾಣುಗಳು ಮತ್ತು ಇನ್ನೀತರ ಮಾರಕ ಪದಾರ್ಥಗಳನ್ನು ಕಳುಹಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ.

Contact Your\'s Advertisement; 9902492681

ಆದ್ದರಿಂದ ರೈತ ಭಾಂಧವರು ಹಾಗೂ ಸಾರ್ವಜನಿಕರು ತಾವು ಯಾವುದೇ ಪದಾರ್ಥಗಳಿಗೆ ಆರ್ಡರ್ ಮಾಡದೇ ಇದ್ದರೂ ತಮ್ಮ ಮನೆಗೆ ಯಾವುದೇ ಪಾರ್ಸಲಗಳು ಬಂದರೆ, ತಕ್ಷಣವೇ ತಂದು ಕೊಟ್ಟವರು ಯಾರು, ಅವರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಪಡೆದುಕೊಂಡು ಪೊಲೀಸರಿಗೆ ದೂರು ನೀಡಿ. ಮುಂದಾಗುವ ಅನಾಹುತವನ್ನು ತಪ್ಪಿಸಲು ಸಹಕಾರವನ್ನು ನೀಡಿ ಎಂದು ತಹಸೀಲ್ದಾರರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here