ಶಹಾಪುರ : ಕೋರೊನಾ ವೈರಸ್ ಮಹಾಮಾರಿಯಿಂದ ಇನ್ನು ಶಾಲೆ ಕಾಲೇಜುಗಳು ಪ್ರಾರಂಭವಾಗದಿರುವುದರಿಂದ ಮಕ್ಕಳು ಬುಗುರಿ ಆಟದಲ್ಲಿ ಬ್ಯೂಜಿಯಾಗಿರುವುದು ತಾಲೂಕಿನ ಹೊಸೂರು ಗ್ರಾಮದಲ್ಲಿ ಕಂಡು ಬಂದಿತು.
ಈ ಬುಗುರಿಯಾಟವು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ ಮಹಾಭಾರತದಲ್ಲಿ ಕೌರವರು ಪಾಂಡವರು ಕೂಡಿಕೊಂಡು ಬುಗರಿ ಆಟವಾಡಿದ್ದು ಸೂಕ್ತಾವಾದ ಉಲ್ಲೇಖವಿದೆ. ಆಷಾಢ ಮಾಸ ಬಂದಾಗ ಮಾತ್ರ ಹಳ್ಳಿಗಳಲ್ಲಿ ಮಕ್ಕಳು ಹೆಚ್ಚಾಗಿ ಬುಗರಿ ಆಡುವುದನ್ನು ಕಂಡು ಬರುತ್ತಿತ್ತು ಆದರೆ ಈಗ ಕರೋನಾ ವೈರಸ್ ನಿಂದ ಬೇಜಾರಿನಲ್ಲಿದ್ದ ಮಕ್ಕಳು ಯಾವಾಗಲೂ ಬುಗುರಿಯನ್ನೆ ಆಡುತ್ತಾ ಕಾಲ ಕಳೆಯುವಂತಾಗಿದೆ.
ಗ್ರಾಮೀಣ ಭಾಗದ ಆಟಗಳಲ್ಲಿ ಪ್ರಮುಖವಾದದ್ದು ಬುಗುರಿಯಾಟ,ಈ ಬುಗುರಿ ಆಟ ಆಡುತ್ತಾ ಕಾಲ ಕಳೆಯುತ್ತಿರುವ ಗ್ರಾಮೀಣ ಮಕ್ಕಳಲ್ಲಿ ಒಂದೆಡೆ ಸಂತಸ ತಂದರೆ,ಇನ್ನೊಂದಡೆ ಶಾಲೆಗಳು ಪ್ರಾರಂಭವಾಗಿರುವುದರಿಂದ ಬೇಜಾರು ಕೂಡ ಆಗಿದೆ.ಆದಷ್ಟು ಬೇಗನೆ ಶಾಲೆಗಳು ಪ್ರಾರಂಭವಾಗಲಿ ಎಂಬುದು ಮಕ್ಕಳ ಬಯಕೆಯಾಗಿದೆ.