ಡ್ರಗ್ಸ್ ಜಾಲದ ಬಗ್ಗೆ ಉನ್ನತ ತನಿಖೆಯಾಗಲಿ : ದೇಗಾಂವ

0
99

ಕಲಬುರಗಿ: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಬಹಳಷ್ಟು ಚರ್ಚೆ ಆರೋಪಗಳು ನಡೆಯುತ್ತಿವೆ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ಶಾಲೆ ಕಾಲೇಜುಗಳಲ್ಲಿ ಡ್ರಗ್ಸ್ ಧಂದೆ ನಡೆಯುತ್ತಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ ರವರು ಆರೋಪಿಸಿದರು.

ಡ್ರಗ್ಸ್ ಗೆ ಎಷ್ಟೋ ಯುವಕ ಯುವತಿಯರು ರಾಜ್ಯದಲ್ಲಿ ಬಲಿಯಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಡ್ರಗ್ಸ್ ಜಾಲ ಕಂಡು ಬರುತ್ತಿದೆ. ಸಣ್ಣ ಮಕ್ಕಳವರೆಗೂ ಮಾದಕ ವಸ್ತುಗಳ ಜಾಲ ಹರಡಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇದರ ಜೊತೆ ಭವಿಷ್ಯದ ತಲೆಮಾರು ಮಾದಕ ಜಾಲದಲ್ಲಿ ತನ್ನ ಸತ್ವವನ್ನೇ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದರು.

Contact Your\'s Advertisement; 9902492681

ಕೂಡಲೆ ಇದರ ಬಗ್ಗೆ ಪೆÇೀಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಡ್ರಗ್ಸ ಧಂದೆಗೆ ಕಡಿವಾಣ ಹಾಕಬೇಕು. ಇದರಲ್ಲಿ ಪ್ರಭಾವಿಗಳೂ ಇದ್ದಾರೆ ಎಂಬುದು ಕಳವಳ ಮೂಡಿಸುವ ವಿಚಾರ. ಈ ಪ್ರಭಾವಿಗಳು ಯಾರು , ಅವರನ್ನು ಯಾರು ರಕ್ಷಿಸುತ್ತಿದ್ದಾರೆ ? ಎಂಬುವುದನ್ನು ಸರಕಾರ ಕೂಡಲೇ ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ದೇಗಾಂವ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here