ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬ ಆಚರಣೆ

0
25

ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 47ನೇ ಹುಟ್ಟು ಹಬ್ಬದ ಪ್ರಯುಕ್ತ ಅಂತರಗಂಗಾ ಬುದ್ಧಿಮಾಂದ್ಯ ವಸತಿ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕೋಲಾರದ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ಮೆಚ್ಚಿನ ನಾಯಕ ನಟನ ಹುಟ್ಟು ಹಬ್ಬ ಪ್ರಯುಕ್ತ, ಕೋಲಾರದಲ್ಲಿನ ಐತಿಹಾಸಿಕ ಶ್ರೀ ಕೋಲಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Contact Your\'s Advertisement; 9902492681

ನಂತರ ಅಂತರಗಂಗಾ ಬುದ್ದಿಮಾಂದ್ಯರ ವಸತಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ವಿದ್ಯಾ ಸಂಸ್ಥೆಯವರು ಸುದೀಪ್ ಅವರ ಮುಂದಿನ ಚಲನಚಿತ್ರಗಳು ಯಶಸ್ವಿಯಾಗಲಿ, ಹಾಗೂ ಸುದೀಪ್ ರವರಿಗೆ ಹಾಗೂ ಅವರ ಅಭಿಮಾನಿ ಬಳಗದವರಿಗೆ ಆ ದೇವರು, ಅಷ್ಟ ಐಶ್ವರ್ಯ, ಉತ್ತಮ ಆರೋಗ್ಯ, ಆಯಸ್ಸು, ನೆಮ್ಮದಿ ಕರುಣಿಸಲಿ ಎಂದು ಪ್ರಾಥಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ನವೀನ್ ಮದಕರಿ, ಪ್ರಶಾಂತ್, ವೆಂಕಟೇಶ್, ಮಹೇಶ್, ವೇಣು, ನಾಗರಾಜ್, ಶ್ರೀನಿವಾಸ್ ಹಾಗೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here