ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಪ್ರಸ್ತಾವನೆ ಅಹ್ವಾನ

0
59

ಕಲಬುರಗಿ: ಖೇಲೋ ಇಂಡಿಯಾ ಯೋಜನೆಯಡಿ ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಲು ಜಿಲ್ಲೆಯ ಅರ್ಹ ನುರಿತ ಕ್ರೀಡಾಪಟು/ಕ್ರೀಡಾ ಮೂಲಭೂತ ಸೌಲಭ್ಯ ಹೊಂದಿರುವ ನೋಂದಾಯಿತ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕ್ರೀಡಾಪಟುಗಳ ವಯೋಮಿತಿ 40 ವರ್ಷದೊಳಗಿರಬೇಕು. ಅಂಗೀಕೃತ ಅಂತರರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿರಬೇಕು. ಹಿರಿಯ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಪದಕ ವಿಜೇತರಾಗಿರಬೇಕು. ರಾಷ್ಟ್ರಮಟ್ಟದ ಆಲ್ ಇಂಡಿಯಾ ಯುನಿವರ್ಸಿಟಿ ಪಂದ್ಯಾವಳಿಯಲ್ಲಿ ಪದಕ ವಿಜೇತರಾಗಿರಬೇಕು.

Contact Your\'s Advertisement; 9902492681

ಕನಿಷ್ಠ ಹಿರಿಯ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಅರ್ಹರು. 14 ಕ್ರೀಡೆಗಳಾದ ಅಥ್ಲೆಟಿಕ್ಸ, ಆರ್ಚರಿ, ಬ್ಯಾಟ್‍ಮಿಟನ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜೂಡೊ, ರೊಯಿಂಗ್, ಶೂಟಿಂಗ್, ಈಜು, ಟೇಬಲ್ ಟೇನ್ನಿಸ್, ಕುಸ್ತಿ, ಭಾರ ಎತ್ತುವ ಕ್ರೀಡಾ ವಿಭಾಗಗಳನ್ನು ಗುರುತಿಸಲಾಗಿದೆ. ಈ ಖೇಲೋ ಇಂಡಿಯಾ ಕೇಂದ್ರಗಳಿಗೆ ಭಾರತ ಸರ್ಕಾರದಿಂದ ತರಬೇತುದಾರರ ಗೌರವಧನ, ಸಹಾಯಕ ಸಿಬ್ಬಂದಿ, ಕ್ರೀಡಾ ಉಪಕರಣಗಳು, ಕ್ರೀಡಾಕಿಟ್, ಕ್ರೀಡಾಕೂಟಗಳಲ್ಲಿ ಬಾಗವಹಿಸುವಿಕೆಗೆ ತಗಲುವ ವೆಚ್ಚವನ್ನು ಗರಿಷ್ಠ 5 ಲಕ್ಷ ರೂ. ಗಳನ್ನು ನೀಡಲಾಗುವದು. ಸಂಸ್ಥೆ, ಕ್ಲಬ್‍ನವರು ಕನಿಷ್ಠ 5 ವರ್ಷಗಳಿಂದ ವಿವಿಧ ಕ್ರೀಡೆಗಳನ್ನು ಉನ್ನತೀಕರಿಸಲು ಕ್ರೀಡಾ ತರಬೇತಿಯನ್ನು ನೀಡಿರಬೇಕು.

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಆಸಕ್ತ ಕ್ರೀಡಾ ಪಟುಗಳಿಗೆ ಪರಿಣಾಮಕಾರಿಯಾಗಿ ಕ್ರೀಡಾ ತರಬೇತಿ ನೀಡಲು ಉದ್ದೇಶಿಸಿದೆ. ಈ ಸಂಬಂಧ ಸಾಧನೆ ಮಾಡಿದ ಕ್ರೀಡಾಪಟುಗಳ ಪರಿಣಿತ ಮತ್ತು ಅನುಭವವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ದೇಶಾದ್ಯಂತ ಖೇಲೋ ಇಂಡಿಯಾ ಕ್ರೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

ಮಾರ್ಗಸೂಚಿ ಹಾಗೂ ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ 2020ರ ಸೆಪ್ಟೆಂಬರ್ 10ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844029235ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here