ಚಿಂಚೋಳಿ: ಉದ್ದು, ಹೆಸರು ಖರೀದಿ ಕೇಂದ್ರ ಸ್ಥಾಪಿಸಲು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ರೈತರ ಸಂಪೂರ್ಣ ಉದ್ದು ಖರೀದಿ, ರೈತರ ಬೆಳೆ ಸಾಲ ಮನ್ನಾ, ಕೋವಿಡ್-19 ವಿಪತ್ತು ಘೋಷಣೆ ಪರಿಹಾರ ಘೋಷಣೆ ಮಾಡಬೇಕೆಂದು ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಟಿಪ್ಪು ಸುಲ್ತಾನ್ ತಾಲೂಕು ಸಮಿತಿಯ ಮೋಹಿನ ಮೋಮಿನ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಹಣಮಂತ ಪೂಜಾರಿ, ಪರಿದಪ ತ್ರಿಲಾಪುರ, ಪರಮೇಶ್ವರ ಕಾಂತ, ತುಳಜಪ್ಪ ಮೋಘ ಸೇರಿದಂತೆ ಇತರರು ಇದ್ದರು.