ಕೇಂದ್ರ ಸರಕಾರದ ಏಕ ರೂಪದ ಪ್ರವೇಶ ಪರೀಕ್ಷೆ ನೀತಿ ವಿರುದ್ಧ ಜಯಕರ್ನಾಟಕ ಪ್ರತಿಭಟನೆ

0
33

ಸುರಪುರ: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪದ ನೇಮಕಾತಿ ಪರೀಕ್ಷೆ ನೀತಿಯನ್ನು ಜಯಕರ್ನಾಟಕ ಸಂಘಟನೆ ವಿರೋಧಿಸುತ್ತದೆ ಎಂದು ಅಧ್ಯಕ್ಷ ರವಿ ನಾಯಕ ಬೈರಿಮರಡಿ ಮಾತನಾಡಿದರು.

ಜಯಕರ್ನಾಟಕ ಸಂಘಟನೆಯಿಂದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕ ರೂಪದ ನೇಮಕಾತಿ ಪರೀಕ್ಷೆ ಜಾರಿಯಿಂದಾಗಿ ದೇಶದಲ್ಲಿನ ಎಲ್ಲಾ ಭಾಷೆಯ ಜನರು ಕೇವಲ ಹಿಂದಿ ಅಥವಾ ಇಂಗ್ಲೀಷಿನಲ್ಲಿ ಪರೀಕ್ಷೆ ಬರೆಯಬೇಕಾಗಲಿದೆ.ಇದರಿಂದ ನಮ್ಮ ಕನ್ನಡ ನಾಡಿನ ಅದರಲ್ಲು ಗ್ರಾಮೀಣ ಭಾಗದ ಅಭ್ಯಾರ್ಥಿಗಳು ಹೆಚ್ಚಾಗಿ ಇಂಗ್ಲೀಷ ಮತ್ತು ಹಿಂದಿ ಬಾರದವರು ಕೇವಲ ಕನ್ನಡದಲ್ಲಿ ಪರೀಕ್ಷೆ ಬರೆಯುವಂತವರು ನಾನ್ ಗೆಜೆಟೆಡ್ ಹುದ್ದೆಗಳಿಂದ ವಂಚಿತರಾಗಲಿದ್ದಾರೆ.

Contact Your\'s Advertisement; 9902492681

ಕೇಂದ್ರ ಜಾರಿಗೆ ತರಲು ಮುಂದಾಗಿರುವ ಈ ನೀತಿಯನ್ನು ಬಲವಾಗಿ ವಿರೋಧಿಸುತ್ತದೆ.ಒಂದು ವೇಳೆ ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕ ರೂಪದ ಪ್ರವೇಶ ಪರೀಕ್ಷೆ ನೀತಿ ಜಾರಿಗೆ ತಂದಲ್ಲಿ ಸಂಘಟನೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಜು ದರಬಾರಿ,ಕಾರ್ಯಾಧ್ಯಕ್ಷ ಶರಣಪ್ಪ ಬೈರಿಮರಡಿ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ ಯಲ್ಲಪ್ಪ ಕಲ್ಲೋಡಿ ಹಣಮಂತ್ರಾಯ ಮೇಟಿಗೌಡ ರಾಘವೇಂದ್ರ ಗೋಗಿಕರ್ ಮೌನೇಶ ದಳಪತಿ ಬಸವರಾಜ ಕವಡಿಮಟ್ಟಿ ದೇವು ನಾಯಕ ಜಾಲಿಬೆಂಚಿ ನಬೀಸಾ ಬಸವರಾಜ ಬಿಲಾಕಲ್ ಖಾಜಾಹುಸೇನ್ ತಿಮ್ಮಾಪುರ ವಾಸುದೇವ ನಾಯಕ ದೇವು ನಾಯಕ ಕಬಾಡಗೇರಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here