ಪತ್ರಿಕಾ ವಿತರಕರಿಗೆ ಸಿಗಲಿ ಸೇವಾ ಭದ್ರತೆ

0
43

ಕಲಬುರಗಿ: ಸರ್ವ ವಿಷಯಗಳ ಜ್ಞಾನ, ಅನುಭವದ ಅಮೃತವನ್ನು ಒಳಗೊಂಡ ಪತ್ರಿಕೆಗಳನ್ನು ಮಳೆ, ಚಳಿ, ಬಿಸಲು, ಗಾಳಿ, ಹಗಲು, ರಾತ್ರಿಯನ್ನದೇ, ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಮೂಲಕ ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವೆಯಾಗಿ ಪತ್ರಿಕಾ ವಿತರಕರು ಕಾರ್ಯ ಮಾಡುತ್ತಾರೆ. ಆದರೆ ಅವರ ಜೀವನ ಅಭದ್ರತೆಯಲ್ಲಿದ್ದು, ಅವರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಟ ವೇತನ ನಿಗದಿಗೊಳಿಸುವಿಕೆ, ಇಎಎಸ್‌ಐ ಸೌಲಭ್ಯ, ಪಿಎಫ್ ಆಶ್ರಯದಂತಹ ಸೇವಾ ಭದ್ರತೆ ದೊರೆಯಬೇಕೆಂದು ಪತ್ರಿಕಾ ವಿತರಕ ಗುರುರಾಜ ಗುಡ್ಡಾ ತಮ್ಮ ಹಕ್ಕೋತ್ತಾಯ ಮಾಡಿದರು.

ಅವರು ನಗರದ ಕೆಎಚ್‌ಬಿ ಗ್ರೀನ್ ಪಾರ್ಕ್ ಗ್ರೀನ್ ಪಾರ್ಕ್‌ನಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ’ಕೆಎಚ್‌ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ’ಗಳ ಸಂಯುಕ್ತ ಆಶ್ರಯದಲ್ಲಿ ’ಪತ್ರಿಕಾ ವಿತರಕರ ದಿನಾಚರಣೆ’ ಅಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರಿಗೆ ಸತ್ಕಾರ ಸಮಾರಂಭದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಪತ್ರಿಕಾ ವಿತರಣೆ ಅರೆಕಾಲಿಕ ಕೆಲಸವಾಗಿದ್ದು, ಇದರಿಂದ ನಮ್ಮ ಕೆಲಸದ ಜೊತೆಗೆ ಮಾಡಬಹುದಾಗಿದೆ. ಇದರಿಂದ ಆರ್ಥಿಕ ಸಹಾಯವಾಗುತ್ತದೆ. ನಾನು ಕಳೆದ ೧೨ ವರ್ಷಗಳಿಂದ ಇದೇ ಕಾರ್ಯವನ್ನು ಮಾಡಿ, ನನ್ನ ಶಿಕ್ಷಣವನ್ನು ಪೂರೈಸಿರುತ್ತೇನೆ. ಈ ಕಾರ್ಯ ನನ್ನ ಜೀವನವನ್ನು ರೂಪಿಸಿದ್ದು, ನಾನೆಂದಿಗೂ ನನ್ನ ಕರ್ತವ್ಯ ಮರೆಯುವಂತಿಲ್ಲವೆಂದು ತಮ್ಮ ಮನದಾಳದ ಆಶಯವನ್ನು ವ್ಯಕ್ತಪಡಿಸಿದರು.

ಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ ಹಾಗೂ ಸುಜಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುನೀಲಕುಮಾರ ವಂಟಿ ಮಾತನಾಡುತ್ತಾ, ಪತ್ರಿಕಾ ವಿತರಕರು ತಮ್ಮ ಕಾರ್ಯ ಕೀಳೆಂದು ಭಾವಿಸಬಾರದು. ಪತ್ರಿಕೆ ವಿತರಣೆ ಮಾಡಿದ ಕಲಾಂ ರಾಷ್ಟ್ರಪತಿಯಾಗಿದ್ದಾರೆ. ಅನೇಕ ಉನ್ನತ ಅಧಿಕಾರಿಗಳಾಗಿದ್ದಾರೆ. ಅವರು ಶ್ರಮ ಸಂಸ್ಕೃತಿಯ ರಕ್ಷಕರು. ಈ ಕಾರ್ಯ ಲಾಭದ ಉದ್ದೇಶದಿಂದಲ್ಲ. ಅದರಲ್ಲಿ ಸಮಾಜ ಸೇವಾ ಮನೋಭಾವನೆ ಅಡಗಿದೆ. ಅವರಿಗೆ ಪತ್ರಿಕಾ ವಿತರಕರು ಎನ್ನುವ ಬದಲು, ಜ್ಞಾನ ಪ್ರಸಾರಕರೆಂಬುದು ಸೂಕ್ತವಾದ ಶಬ್ದವಾಗುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ರಜೆರಹಿತ ಕೆಲಸ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿಯೆಂದರು.

ಪತ್ರಿಕಾ ವಿತರಕರಾದ ಬಾಬುರಾವ ಗೌಳಿ, ಗುರುರಾಜ ಗುಡ್ಡಾ, ನಿತೀನ ಶರಸಾಗರ, ಲಕ್ಷ್ಮೀಕಾಂತ ಜಮಾದಾರ, ವಿನೋದ ಗೌಳಿ, ಶಂಕರ ಕಣ್ಣಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸಂಗಮೇಶ ಇಮ್ಡಾಪೂರ್, ನರಸಪ್ಪ ಬಿರಾದಾರ ದೇಗಾಂವ, ಸೂರ್ಯಕಾಂತ ಸಾವಳಗಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ ಮುತ್ತಂಗಿ, ಡಿ.ವಿ.ಕುಲಕರ್ಣಿ, ಶಿವಶರಣಪ್ಪ ಹಡಪದ, ಬಸವರಾಜ ಹೆಳವರ ಯಾಳಗಿ, ಶ್ರೀನಿವಾಸ ಬುಜ್ಜಿ, ಬಸವರಾಜ ರಟಕಲ್, ಓಂಕಾರ ಕಣ್ಣಿ ಸೇರಿದಂತೆ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here