ಸುರಪುರ: ೨೦೧೮ರ ಸಪ್ಟೆಂಬರ್ ೦೫ ರಂದು ನವದೆಹಲ್ಲಿಯಲ್ಲಿ ನಡೆದ ರೈತ ಕಾರ್ಮಿಕರ ಸಂಘರ್ಷ ರ‍್ಯಾಲಿ ದಿನದ ನೆನಪಿಗಾಗಿ ನಗರದ ತಹಸೀಲ್ ಕಚೇರಿ ಮುಂದೆ ಸಿಯಟಿಯು ಹಾಗು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಕಳೆದ ೨೦೧೮ರ ಸಪ್ಟೆಂಬರ್ ೫ ರಂದು ನವದೆಹಲಿಯಲ್ಲಿ ಲಕ್ಷಾಂತರ ಜನ ರೈತ ಕಾರ್ಮಿಕರು ಸೇರಿ ಕೇಂದ್ರ ಸರಕಾರಕ್ಕೆ ಅನೇಕ ಬೇಡಿಕೆಗಳ ಈಡೇರಿಸಲು ಪ್ರತಿಭಟಿಸಲಾಗಿತ್ತು.ಅಂದಿನ ದಿನದ ನೆನಪಿಗಾಗಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಿ ರೈತ ಕಾರ್ಮಿಕರ ಹಾಗು ಅಂಗನವಾಡಿ ನೌಕರರ ಮತ್ತು ಆಶಾ ಕಾರ್ಯಕರ್ತೆಯರ ಸೇರಿದಂತೆ ವಿವಿಧ ೧೦ ಬೇಡಿಕೆಗಳ ಈಡೇರಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸುರೇಖಾ ಕುಲಕರ್ಣಿ ಬಸಮ್ಮ ಆಲ್ಹಾಳ ನಸೀಮಾ ಮುದ್ನೂರ ರಾಧಾ ಲಕ್ಷ್ಮೀಪುರ ಪ್ರಕಾಶ ಆಲ್ಹಾಳ ಸೇರಿದಂತೆ ಅನೇಕರಿದ್ದರು.