ಅರಕೇರಾ (ಜೆ) ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ: ಕ್ರಾಂತಿ

0
51

ಸುರಪುರ: ಹಿಂದೆ ಸುರಪುರ ತಾಲೂಕಿನಲ್ಲಿದ್ದ ಹಾಗು ಈಗ ಹುಣಸಗಿ ತಾಲೂಕಿನಲ್ಲಿರು ಅರಕೇರಾ(ಜೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಗ್ಗಳ್ಳಿ ಗ್ರಾಮದಲ್ಲಿನ ಬಡ ಹಾಗು ಅಂಗವಿಕಲ ಕುಟುಂಬಸ್ಥನಾದ ಶಿವಪ್ಪ ತಂದೆ ಗುರುಬಸಪ್ಪ ಎಂಬುವವರಿಗೆ ಮನೆ ಕಟ್ಟಿಕೊಳ್ಳಲು ಪರವಾನಿಗೆ ನೀಡದೆ ಕಿರುಕುಳ ನೀಡುತ್ತಿರುವ ಅರಕೇರಾ (ಜೆ) ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ)ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.

ನಗರದ ತಾಲೂಕು ಪಂಚಾಯತಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ತಳ್ಳಳ್ಳಿಯ ಅಂಗವಿಕಲ ಶಿವಪ್ಪ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖರೀದಿಸಿದ ಪ್ಲಾಟಿನಲ್ಲಿ ಮನೆ ಕಟ್ಟಿಕೊಳ್ಳಲು ಗ್ರಾಮ ಪಂಚಾಯತಿಯಿಂದ ಪರವಾನಿಗೆ ಕೇಳಿದರೆ ಪಂಚಾಯತಿಯವರೆ ಬೇರೆಯವರಿಂದ ತಕರಾರು ಅರ್ಜಿ ಪಡೆದು ವಿನಾಕಾರಣ ಪರವಾನಿಗೆ ನೀಡದೆ ಬಡ ಕುಟಂಬಕ್ಕೆ ಕಿರಕುಳ ನೀಡುತ್ತಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಕೂಡಲೆ ಈ ಪಂಚಾಯತಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಶಿವಪ್ಪನಿಗೆ ಮನೆ ಕಟ್ಟಿಕೊಳ್ಳಲು ಪರವಾನಿಗೆ ನೀಡಬೇಕು.ಇಲ್ಲವಾದಲ್ಲಿ ಮುಂಬರು ೧೦ನೇ ತಾರೀಖು ಸುರಪುರ ತಾಲೂಕು ಪಂಚಾಯತಿಗೆ ಬೀಗ ಮತ್ತು ೧೮ನೇ ತಾರೀಖು ಹುಣಸಗಿ ತಾಲೂಕು ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿ ನಂತರ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತಿ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರರಾದ ಜೆಟ್ಟೆಪ್ಪ ನಾಗರಾಳ ಬುದ್ಧಿವಂತ ನಾಗರಾಳ ತಿಪ್ಪಣ್ಣ ಶೆಳ್ಳಗಿ ಮರಲಿಂಗಪ್ಪ ಹುಣಸಿಹೊಳೆ ಬಸವಲಿಂಗಪ್ಪ ಏವೂರ ಚಂದ್ರಕಾಂತ ಹಂಪಿನ್ ಮರಲಿಂಗಪ್ಪ ನಾಟೆಕಾರ್ ಭೀಮಣ್ಣ ಕ್ಯಾತನಾಳ ಮಲ್ಲಪ್ಪ ಬಡಿಗೇರ ಮಾಣಪ್ಪ ಬಿಜಾಸಪುರ ಮರೆಪ್ಪ ಹಾಲಗೇರಾ ಭೀಮಾಶಂಕರ ಬಾದ್ಯಾಪುರ ಮಲ್ಲಪ್ಪ ಬಡಿಗೇರ ಶೇಖಪ್ಪ ಭಂಡಾರಿ ಬಸಪ್ಪ ಅಗತೀರ್ಥ ಪ್ರಕಾಶ ಆಲ್ಹಾಳ ರಮೇಶ ಬಡಿಗೇರ ಪಾರಪ್ಪ ತಳವಾರ ಭೀಮರಾಯಗೌಡ ಶಾಂತಪುರ ಮೌನೇಶ ತಳವಾರ ದೇವರಾಜ ಬಾದ್ಯಾಪುರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here