ಒಳಮೀಸಲಾತಿ ತೀರ್ಪು ಮಾದಿಗರಿಗೆ ಸಿಕ್ಕಿರುವ ಐತಿಹಾಸಿಕ ತೀರ್ಪು: ರಾಜು ಹದನೂರ

0
33

ಕಲಬುರಗಿ: ಜಸ್ಟಿಸ್ ಅರುಣಕುಮಾರ ಮಿಶ್ರಾ ಅವರನ್ನೊಳಗೊಂಡ ಐವರ ಪೀಠ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡಲು ಸಂವಿಧಾನದ ವಿಧಿಯನ್ನು ತಿದ್ದುಪಡಿ ಮಾಡಲು ಅಗತ್ಯವಿಲ್ಲ. ಆದರೆ ಆಯಾ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿರುವುದು ಸ್ವಾಗತಾರ್ಹವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನ್ಯಾ.ಎ.ಜೆ. ಸದಾಶಿವ ಆಯೋಗವನ್ನು ಅನುಷ್ಠಾನಗೊಳಿಸಬೇಕೆಂದು ಮಾದಿಗ ದಂಡೋರ (ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ) ಜಿಲ್ಲಾಧ್ಯಕ್ಷ ರಾಜು ಹದನೂರ ಒತ್ತಾಯಿಸಿದ್ದಾರೆ.

ರಾಷ್ರ್ಟೀಯ ನಾಯಕರಾದ ಮಂದಾಕೃಷ್ಣ ಮಾದಿಗರ ನೇತ್ರತ್ವದಲ್ಲಿ ೨೫ ವರ್ಷಗಳ ಕಾಲ ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾವಾಗಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸತತವಾಗಿ ಹೋರಾಟ ನಡೆಸಿದ್ದರ ಫಲವಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ ಅವರು ಆಯೋಗ ರಚನೆ ಮಾಡಿದರು. ೭ ವರ್ಷಗಳ ನಂತರ ಸರಕಾರಕ್ಕೆ ನ್ಯಾ. ಎ.ಜೆ. ಸದಾಶಿವ ಆಯೋಗವು ಮಾದಿಗರಿಗೆ ಸರಕಾರ ಸೌಲತ್ತುಗಳು ಸಿಗದೆ ಅನ್ಯಾಯವಾಗಿದೆಯೆಂದು ಸರಕಾರಕ್ಕೆ ವರದಿ ನೀಡಿತ್ತು. ಆದರೆ ಇದನ್ನು ಅನುಷ್ಟಾನ ಮಾಡಲು ಎಲ್ಲಾ ಪಕ್ಷದ ಸರಕಾರಗಳು ಹಿಂದೇಟು ಹಾಕಿದವು. ಆದರೆ ಒಳಮೀಸಲಾತಿಯ ಬಗ್ಗೆ ಚನೈ ಹೈಕೋರ್ಟ ಐತಿಹಾಸಿಕ ತೀರ್ಪು ನೀಡಿರುವದಕ್ಕೆ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಎ.ಜೆ. ಸದಾಶಿವ ಆಯೋಗ ಅನುಷ್ಠಾನ ಮಾಡಲು ರೂ.೧೨ ಕೋಟಿ ನೀಡಿದ್ದರು. ಈಗ ಅವರದೇ ಸರಕಾರವಿದ್ದು ಶೀಘ್ರವೆ ಸದಾಶಿವ ಆಯೋಗವನ್ನು ಅನುಷ್ಠಾನಗೊಳಿಸಬೇಕು ಎಂದರು.

ಸದಾಶಿವ ಆಯೋಗಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ನಾಯಕರಿಗೆ ಮುಂದಿನ ದಿನಗಳಲ್ಲಿ ಮಾದಿಗರು ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು. ಪಶುಸಂಗೋಪನ ಸಚಿವ ಪ್ರಭು ಚವ್ಹಾಣ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಖಂಡನೆ: ದಲಿತ ಯುವಕ ಅನೀಲ ಇಂಗಳಗಿ ಅವರನ್ನು ಹಾಡು-ಹಗಲೆ ಮಾರಕಾಸ್ತ್ರಗಳಿಂದ ಹತ್ಯ ಮಾಡಿದ್ದು ಖಂಡನೀಯವಾಗಿದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಜೊತೆಗೆ ಮೃತ ಕುಟುಂಬಕ್ಕೆ ಸರಕಾರ ರೂ.೫೦ ಲಕ್ಷ ಪರಿಹಾರ ೧೦ ಎಕರೆ ಜಮೀನು, ಮನೆಯಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡುವಂತೆ ಸಮುದಾಯದ ಮುಖಂಡರಾದ ಕಲಬುರಗಿ ದಂಡೋರ ಜಿಲ್ಲಾಧ್ಯಕ್ಷ ರಾಜು ಹದನೂರ, ರಾಜು ವಾಡೇಕರ, ನಾಗರಾಜ ಗುಂಡಗುರ್ತಿ, ಬಂಡೇಶ ರತ್ನಡಗಿ, ರಮೇಶ ವಾಡೇಕರ, ಅಂಬಾರಾಯ ಬೆಳಕೋಟಾ, ರಾಜು ಕಟ್ಟಿಮನಿ, ಪ್ರದೀಪ ಭಾವೆ, ಶಿವಶರಣಪ್ಪ ದಂಡೋತಿ, ಅಂಬಾರಾಯ ಚಲಗೇರಿ, ರಂಜಿತ ಮೂಲಿಮನಿ, ಅನೀಲ ಡೋಂಗರಗಾಂವ ಎಲ್ಲಾ ತಾಲೂಕಿನ ಅಧ್ಯಕ್ಷರು ಮತ್ತು ಕಾರ್ಯಕರ್ತರು ಹಾಗು ನಿವೃತ್ತ ಅಧಿಕಾರಿಗಳಾದ ಮಾಣಿಕ ಕಟ್ಟಿಮನಿ, ಓಂಕಾರ, ಶಾಂತಪ್ಪ ಬಂದರವಾಡ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here