ಶಹಾಬಾದ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮೃದ್ಧಿ ಯೋಜನೆಯಡಿ ಬೀದಿ ಬದಿ ಮಹಿಳಾ ವ್ಯಾಪಾರಸ್ಥರಿಗೆ ಹತ್ತು ಸಾವಿರ ರೂವರೆಗೂ ಪ್ರೋತ್ಸಾಹ ಧನ ನೀಡುತ್ತಿದ್ದು, ಅದರ ಸಂಪೂರ್ಣ ಲಾಭವನ್ನು ವ್ಯಾಪಾರಸ್ಥರು ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ.ವಿ.ಟೆಂಗಳಿ ಹೇಳಿದರು.
ಅವರು ಮಾಲಗತ್ತಿ ಗ್ರಾಮದಲ್ಲಿ ಆಯೋಜಿಸಲಾದ ಬೀದಿ ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರ ವಿರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾರಾದರೂ ಹತ್ತಿರ ತೆಗೆದುಕೊಳ್ಳುವ ಸಾಲಕ್ಕೆ ಯಾವುದೇ ಜಾಮೀನು ಬೇಕಾಗುತ್ತೆ. ಇದರಿಂದ ಬಡ್ಡಿ ಕಟ್ಟುವುದರಲ್ಲೆ ಜೀವನ ಕಳೆಯುವಂತಾಗುತ್ತದೆ.ಇದರಿಂದ ಯಾವುದೇ ರೀತಿ ಮುಂದುವರಿಯಲು ಸಾಧ್ಯವಾಗುವುದಿಲ್ಲ.ಆದರೆ ಸರ್ಕಾರ ಮಹಿಳೆಯರಿಗೆ ಸ್ವಾಲಂಬಿ ಜೀವನ ನಡೆಸಲು ಹತ್ತು ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆದ್ದರಿಂದ ಸರ್ಕಾರದ ಲಾಭವನ್ನು ಪಡೆದುಕೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಮುಂದಾಗಬೇಕೆಂದು ಹೇಳಿದರು.
ಬಿಜೆಪಿ ಚಿತ್ತಾಪೂರ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ, ತಾಪಂ ಸದಸ್ಯ ಮಲ್ಲಣ್ಣ ಸಣಮೋ, ಗ್ರಾಪಂ ಅಧ್ಯಕ್ಷ ಅಪ್ಪಾರಾವ ಪಾಟೀಲ, ಶರಣಪ್ಪ ಈಶ್ವರ್ ಮುಗುಳನಾಗಾವ, ಸಣಮೋ, ಗೋಪಾಲ ರಾಠೋಡ, ರವಿ ಯರಗೋಳ, ಭರತ್ ಮುತ್ತಗಾ, ದೇವಪ್ಪ ಕುಲಕುಂದಿ, ಪರಶುರಾಮ ರಾವೂರ, ಶ್ರೀಶೈಲ ನಾಟೀಕಾರ, ಸಿದ್ದು ಅಲ್ಲೂರ್, ಶಕುಂತಲಾ ಕುಲಕುಂದಿ, ರಾಜು ಪಾಟೀಲ,ಶಂಕ್ರೆಪ್ಪ ಶಂಕರವಾಡಿ,ರಾಜು ತಳವಾರ ಇತರರು ಇದ್ದರು.