ಕೊರೋನಾ ಸೋಂಕಿನಿಂದ ಮತ್ತಿಬ್ಬರು ನಿಧನ

0
40

ಕಲಬುರಗಿ: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯ ಮತ್ತಿಬ್ಬರು ನಿಧನರಾಗಿರುವ ಬಗ್ಗೆ ರವಿವಾರ ವರದಿಯಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 225ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆತ ಅಫಜಲಪೂರ ತಾಲೂಕಿನ ಬಸವೇಶ್ವರ ನಗರದ 45 ವರ್ಷದ ಪುರುಷ (P-388359) ಸೆ.5 ರಂದು ನಿಧನದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಕೊರೋನಾ ಸೋಂಕು ತಗಲಿರುವುದು ದೃಢವಾಗಿದೆ.

Contact Your\'s Advertisement; 9902492681

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಓಂ ನಗರದ 75 ವರ್ಷದ ವೃದ್ಧ (P-407920) ಸೆ.4 ರಂದು ಆಸ್ಪತ್ರೆಗೆ ದಾಖಲಾಗಿ ಸೆ.5 ರಂದು ನಿಧನ ಹೊಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here