ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು ಅಕಾಡೆಮಿ ಸ್ಥಾಪಿಸಬೇಕೆಂದು ಹೈದರಾಬಾದ್ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ವತಿಯಿಂದ ಸೆಪ್ಟೆಂಬರ್ 9 ರಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಫೋರಂ ಅಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ ಅವರು ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿ ಉರ್ದು ಭಾಷೆಯ ಪ್ರಮುಖ ಮತ್ತು ಎರಡನೇ ದರ್ಜೆಯ ಭಾಷೆಯಾಗಿದ್ದು, ಮಾಜಿ ಸಿಎಂ ಎನ್ ಧರ್ಮಸಿಂಗ್ ಮತ್ತು ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮಹಾನಾಯಕರು ಉರ್ದು ಭಾಷೆಯ ಮೂಲಕ ಸಂಸತ ಮತ್ತು ವಿಧಾನ ಸಭೆಯಲ್ಲಿ ಶಾಹೇರಿ ಹೇಳುವ ಮೂಲಕ ಉರ್ದು ಭಾಷೆಯ ವಿಶಿಷ್ಠೆತೆಯನ್ನು ಎತ್ತಿ ತೊರಿಸಿದ್ದಾರೆ.
ಅಲ್ಲದೇ ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರು ಸಹ ಹಿಂದೆ ಭಾಷೆ ಗಾಂಭಿರ್ಯತೆಯನ್ನು ತನ್ನ ರಾಜಕೀಯ ಜೀವನದಲ್ಲಿ ಮೈಗೊಡಿಸಿಕೊಂಡು ಸರ್ವರು ಮೆಚ್ಚುವಂತಹ ಆಡಳಿತ ನೀಡಿದ್ದಾರೆ.
ಆದರೂ ಸಹ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಉರ್ದು ಭಾಷೆಯನ್ನು ಕಡೆಗಣಿಸಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಉರ್ದು ಅಕಾಡೆಮಿ ಸ್ಥಾಪಿಸಬೇಕೆಂದು 9 ರಂದು ಮನವಿ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುತ್ತಿದ್ದು, ಈ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.