ಕಂದಾಯ ಇಲಾಖೆ ಕಚೇರಿಗಳಲ್ಲಿನ ತಾಂತ್ರಿಕ ದೋಷ ನಿವಾರಣಗೆ ರಮೇಶ ದೊರೆ ಆಗ್ರಹ

0
401

ಸುರಪುರ: ಕಂದಾಯ ಇಲಾಖೆಗಳ ಕಚೇರಿಗಳಲ್ಲಿನ ಸರ್ವರ್ ಸಮಸ್ಯೆಯ ನೆಪ ಹೇಳಿ ನಿತ್ಯವು ರೈತರಿಗೆ ಪಟ್ಟಣಕ್ಕೆ ಅಲೆಸಲಾಗುತ್ತಿದೆ.ಇದರಿಂದ ರೈತರು ಬೇಸತ್ತು ಹೋಗಿದ್ದಾರೆ.ಆದ್ದರಿಂದ ಕೂಡಲೆ ಸರಕಾರ ಕಂದಾಯ ಇಲಾಖೆಯಲ್ಲಿನ ತಾಂತ್ರಿಕ ದೋಷ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಕಂದಾಯ ಸಚಿವ ಆರ್.ಅಶೋಕ ಹಾಗು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿರುವ ಅವರು,ಕಂದಾಯ ಇಲಾಖೆಯ ಕಚೇರಿಯಲ್ಲಿ ರೈತರು ಇಸಿ ಪಡೆಯಲು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.ರೈತರು ಯಾವಾಗ ಬಂದು ಕೇಳಿದರು ಸರ್ವರ್ ಇಲ್ಲ ಎನ್ನುವ ಸಿದ್ಧ ಉತ್ತರ ಸಿಬ್ಬಂದಿಗಳು ನೀಡುತ್ತಾರೆ.

Contact Your\'s Advertisement; 9902492681

ಇದರಿಂದ ರೈತರು ಬೇಸತ್ತಿದ್ದಾರೆ.ಈಗಾಗಲೆ ಕೊರೊನಾ ಮಹಾಮಾರಿ ಜನರನ್ನು ನಲುಗಿಸಿದೆ ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿನ ಕೆಲಸಗಳು ಸರ್ವರ್ ಕಾರಣದಿಂದ ಆಗದಿರುವುದಕ್ಕೆ ರೈತರು ಬ್ಯಾಂಕ್ ಸಾಲವು ದೊರೆಯದೆ ಇತ್ತ ಕೊರೊನಾ ಮಹಾ ಮಾರಿಯ ಭಯದಿಂದ ಕಚೇರಿಗೆ ಬರಲು ಹಿಂದೇಟು ಹಾಕುವಂತಾಗಿದೆ.ಆದ್ದರಿಂದ ಕೂಡಲೆ ಸರಕಾರ ಕಂದಾಯ ಇಲಾಖೆಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here