ಕೊರೊನಾ ಸೊಂಕಿಗೆ ಕಕ್ಕೇರಾ ಪತ್ರಕರ್ತ ವೆಂಕಟೇಶ ದೊರೆ ಬಲಿ: ಹಲವರ ಶೋಕ

0
126

ಸುರಪುರ: ಕೊರೊನಾ ವೈರಸ್ ಎಂಬ ಮಹಾಮಾರಿ ಇಡೀ ಜಗತ್ತಿಗೆ ಕಂಟಕವಾಗಿ ಕಾಡುತ್ತಿದ್ದು ಲಕ್ಷಾಂತರ ಜನರನ್ನು ಬಲಿ ಪಡೆದಿದೆ.ಅಂತಹ ಬಲಿಯಾದವರ ಸಾಲಿಗೆ ಹುಣಸಗಿ ತಾಲೂಕಿನ ಕಕ್ಕೇರಾದ ಪತ್ರಕರ್ತರ ವೆಂಕಟೇಶ ದೊರೆಯು ಸೇರಿದ್ದಾರೆ.

ವೆಂಕಟೇಶ ದೊರೆ (೫೨ ವರ್ಷ) ಕಳೆದ ಅನೇಕ ವರ್ಷಗಳಿಂದ ನಾಡಿನ ಹೆಸರಾಂತ ಪತ್ರಿಕೆಯೊಂದರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.ಕಳೆದ ಕೆಲ ದಿನಗಳ ಹಿಂದೆ ಜ್ವರ ನೆಗಡಿ ಕಂಡು ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗದೆ ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.ಮೃತರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಬೆಳಿಗ್ಗೆ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ.ನಂತರ ೧೧ ಗಂಟೆಯ ವೇಳೆಗೆ ಕೋವಿಡ್ ನಿಯಮದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Contact Your\'s Advertisement; 9902492681

ಸದಾಕಾಲ ಚಲನಶೀಲರಾಗಿದ್ದ ವೆಂಕಟೇಶ ದೊರೆಯವರು ಪತ್ನಿ ಇಬ್ಬರು ಹೆಣ್ಣು ಮತ್ತು ಇಬ್ಬರು ಗಮಡು ಮಕ್ಕಳಿದ್ದ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನದಿಂದ ಇಡೀ ಕುಟುಂಬ ವರ್ಗ ಶೋಕ ಸಾಗರದಲ್ಲಿ ಮುಳುಗಿದೆ.ಅಲ್ಲದೆ ಮೃತರು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್‌ನ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡು ಪತ್ರಕರ್ತರ ಹಲವಾರು ಸಮಸ್ಯೆಗಳ ನಿವಾರಣೆಗೆ ಧ್ವನಿ ಎತ್ತಿದ್ದರು.ಹೋರಾಟ ಮನೋಭಾವವುಳ್ಳ ವೆಂಕಟೇಶ ದೊರೆಯವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಯಾದಗಿರಿ ಜಿಲ್ಲೆಯ ಎಲ್ಲಾ ಪತ್ರಕರ್ತರು ದಿಗ್ಭ್ರಮೆಗೊಳಗಾಗಿದ್ದಲ್ಲದೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರ ವೆಂಕಟೇಶ ದೊರೆ ನಿಧನಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಕೆಜೆಯು ರಾಜ್ಯಾಧ್ಯಕ್ಷ ನಾರಾಯಣ ಬಿ.ಜಿಲ್ಲಾಧ್ಯಕ್ಷ ಡಿ.ಸಿ ಪಾಟೀಲ ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ ಸೇರಿದಂತೆ ಕೆಜೆಯು ರಾಜ್ಯ,ಜಿಲ್ಲಾ ಮತ್ತು ಎಲ್ಲಾ ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here