ಕಲಬುರಗಿ: ವಿಧಾನ ಪರಿಷತ್ ಸದಸ್ಯರಾದ ಸುನಿಲ್ ವಲ್ಯಾಪುರೆ ಹಾಗೂ ಇವರ ಪುತ್ರರಾದ ಬಿಜೆಪಿ ಯುವ ಮುಖಂಡ ವಿನಯ್ ವಲ್ಯಾಪುರೆ ಅವರಿಗೂ ಕೋವಿಡ್-೧೯ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರೂ ದಾಖಲಾಗಿ ಚಿಕಿತ್ಯೆ ಪಡೆಯುತ್ತಿದ್ದಾರೆ.
ಕೆಲ ದಿನಗಳಿಂದ ನಮ್ಮಗಳ ಸಂಪರ್ಕಕ್ಕೆ ಬಂದವರು ಕೋವಿಡ್ ತಪಾಸಣೆ ಮಾಡಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ವಲ್ಯಾಪುರೆ ಅವರು ಮನವಿ ಮಾಡಿದ್ದಾರೆ.